ಯಾರೂ ನಮ್ಮ ಆಳುಗಳಲ್ಲ - ಸೇವಕರಲ್ಲ. ಮಾನವನೊಬ್ಬನೇ ಬೇಧ ಭಾವ, ಕೀಳರಿಮೆ, ಮೇಲ್ಜಾತಿ, ಕೀಳು ಜಾತಿ, ವಿವಿಧ ಧರ್ಮ, ಕಚ್ಚಾಟ, ಮದ ಮತ್ಸರ ಜಾಸ್ತಿನೇ ಬೆಳೆಸಿಕೊಂಡಿದ್ದಾನೆ. ಹುಟ್ಟಿಬರುವಾಗ ಭುವಿಯ 100% ಜನರು ಒಳ್ಳೆಯವರೆ, ದುರದೃಷ್ಟ ಹುಟ್ಟಿದ ಮೇಲೆ ಬೆಳೆಸುವ ರೀತಿಗಳು ಮಾನವ ಕುಲಕ್ಕೆ ಕೆಟ್ಟಹೆಸರು ಬರುವಷ್ಟರಮಟ್ಟಿಗೆ ಬೆಳೆದು ಕೊನೆಗೆ ಅರ್ಧ ದಾರಿಯಲ್ಲಿ ಸಾಯುವವರೇ ಜಾಸ್ತಿಯಾಗಿದ್ದಾರೆ. ನಾವು ಮಾಡುವ ಉದ್ಯೋಗದಲ್ಲಿ, ಸಂಘ ಸಂಸ್ಥೆ, ಸಮಾಜದಲ್ಲಿ ಬೇಧ ಭಾವಗಳ ಸರಮಾಲೆ ಜೀವಂತವಾಗಿ ಇದ್ದು ಒಬ್ಬರ ಉನ್ನತಿಯ ಬದಲಾಗಿ ಅಳಿವಿಗಾಗಾಗಿ ಶ್ರಮಿಸುವ ಜನರು ಎಲ್ಲಾ ಕಡೆ ಕಾಣಲು ಸಿಗುತ್ತಾರೆ. ಇದಕ್ಕೆ ಕಾರಣ ತಾನೊಬ್ಬನೇ ಬದುಕಿದರೆ ಸಾಕು, ಬೇರೆಯವರು ಏನಾದರೂ ನನಗೆ ಬೇಕಾಗಿಲ್ಲ ಅನ್ನೋ ಮನೋಭಾವನೆ. ಕೆಲವರಿಗೊಂದು ಪೊಗರು, ಉನ್ನತ ಹುದ್ದೆ ಅಥವಾ ಅಧಿಕಾರಕ್ಕೆ ಹೋದಮೇಲೆ ತನ್ನ ಕೆಳ ಹುದ್ದೆಯಲ್ಲಿರೋ ಜನರು ಸೇವಕರು ಅನ್ನೋ ರೀತಿ ನಡೆಯುತ್ತಾರೆ. ಹೌದು ನೈಜ ಘಟನೆ, ನಾನೊಂದು ಕಡೆ ಕೆಲಸ ಮಾಡುತಿದ್ದಾಗ ಒಬ್ಬ ಕೂಲಿ ಕೆಲಸಗಾರ, ಪೈಂಟ್, ಗಾರೆ, ಇನ್ನಿತರ ಕೆಲಸ ಮಾಡುವವನ ಮುಂದೆ ಸಿವಿಲ್ ಸೂಪರ್ವೈಸರ್ ಒಬ್ಬ ಬಡಪಾಯಿ ಕೆಲಸಗಾರನಿಗೆ ಏರುದನಿಯಿಂದಲೇ ಕೆಲಸವನ್ನು ಕೊಡುತಿದ್ದ, ಅವನ ಹಾವಬಾವ ಬಡಪಾಯಿ ಕೆಲಸಗಾರ ಅ...