ಭೂಷಣ (ಕವನ -73)
ಭೂಷಣ
******
ಎನ್ನ ನೆಮ್ಮದಿ ಕಳೆಯುವವರ
ನೆಮ್ಮದಿ ಕೆಡಿಸಲಾರೆ
ಎನ್ನ ನಗು ನಿಲ್ಲಿಸುವವರ
ನಗು ನಿಲ್ಲಿಸಲಾರೆ!
ಎನ್ನ ಬೆಳೆಸಿ ಉಳಿಸಿದವರ
ಎಂದಿಗೂ ಮರೆಯಲಾರೆ
ಎನ್ನ ನಂಬಿ ಇರುವವರ
ಎಂದೆಂದೂ ಬಿಡಲಾರೆ!
ಎನ್ನತನವು ಎನಗೆ ಭೂಷಣ
ಎನ್ನ ತಂದೆ ತಾಯಿಯ ಪ್ರೀತಿ
ಉಳಿಸುತಲಿದೆನ್ನ ಪ್ರಾಣ
ನನ್ನೊಂದಿಗೆ ಇರಲಿ ದೇವ ಗುಣ!
✍️ಮಾಧವ ಅಂಜಾರು 🙏
Comments
Post a Comment