ನಿನ್ನ ಜೊತೆ (ಕವನ -49)
ನಿನ್ನವರ್ಯಾರೆಂದು
ತಿಳಿಯಬೇಕಿದ್ದರೆ
ಬದುಕಿನ ಕಷ್ಟಕಾಲವನ್ನು
ನೆನಪಿಸಿಕೊಳ್ಳು
ನಿನ್ನೊಳಿತನ್ನು ಬಯಸುವವರ
ತಿಳಿಯಬೇಕಿದ್ದರೆ
ಅವರೊಂದಿಗಿದ್ದು ಅರಿತುಕೊಳ್ಳು!
ನಿನ್ನ ಹೊಗಳುವವರೆಲ್ಲರೂ
ಕೈ ಹಿಡಿಯುವವರಲ್ಲ
ನಿನ್ನ ಜೊತೆಗಿರುವ ಎಲ್ಲರೂ
ಕೆಟ್ಟವರೂ ಅಲ್ಲ
ಸ್ಪಷ್ಟ ನಡತೆಯ ಗುಣ
ನಿನ್ನೊಳಗಿದ್ದರೆ
ಯಾರ ಭಯವು ಕಾಡೋದಿಲ್ಲ!
✍️ಮಾಧವ ಅಂಜಾರು 🙏🌷
Comments
Post a Comment