ಪ್ರೋತ್ಸಾಹ (ಕವನ -68)
ಮೊತ್ತೊಬ್ಬರ ಬಗ್ಗೆ
ಹೇಳುವುದಾದರೆ
ಒಳ್ಳೆಯ ಗುಣಮಾತ್ರ ಹೇಳಿ
ಮತ್ತೊಬ್ಬರ ಬಗ್ಗೆ
ತೆಗಳುವುದಾದರೆ
ನಿಮ್ಮ ಮನಸೊಳಗೆ
ವಿಮರ್ಶಿಸಿಕೊಳ್ಳಿ!
ನಿಮಗೊಬ್ಬರು
ಕೆಟ್ಟದನ್ನು ಮಾಡಿದ್ದರೆ
ಅವರಷ್ಟಕ್ಕೆ ಬಿಟ್ಟುಬಿಡಿ
ಒಳಿತನ್ನು ಮಾಡಿದ್ದರೆ
ಅವರೊಂದಿಗೆ ಇದ್ದುಬಿಡಿ
ತೆಗಳುವವನಬಗ್ಗೆ
ತಲೆಕೆಡಿಸಿಕೊಳ್ಳಬೇಡಿ
ಬೆನ್ನು ತಟ್ಟಿ ಪ್ರೋತ್ಸಾಹಿಸುವವನ
ಮರೆಯಲೇಬೇಡಿ!
✍️ಮಾಧವ ಅಂಜಾರು 🌷
Comments
Post a Comment