ಗೋಡೆ (ಕವನ -66)
ಬಿಳಿಯಾದ ಕೂದಲಿಗೆ
ಬಣ್ಣ ಹಚ್ಚೋರು ನಾವು
ಬಿಳಿಯಾಗಿರೋ ಮನಸಿಗೆ
ಮಸಿಬಳಿಯೋರು ನಾವು
ಬಣ್ಣ ಹಚ್ಚೋರು ನಾವು
ಬಿಳಿಯಾಗಿರೋ ಮನಸಿಗೆ
ಮಸಿಬಳಿಯೋರು ನಾವು
ಕೊಳೆಯಾದ ಗೋಡೆಗೆ
ಸುಣ್ಣ ಬಳಿಯೋರು ನಾವು
ಹಳೆಯದಾದ ಕಟ್ಟಡಕೆ
ಬಣ್ಣ ಹಾಕೋರು ನಾವು
ನೋವಾಗಿರೋ ಮನಸಿಗೆ
ಬರೆ ಎಳೆಯೋರು ನಾವು
ದಣಿದಿರೋ ಜೀವಕೆ
ತುಳಿಯೋರು ನಾವು
ನಿಜವಾದ ಮಾನವೀಯತೆ
ಮರೆತವರು ನಾವು
ಮನುಜನ ಸ್ಥಾನಕೆ
ಕಲ್ಮಶವೇ ನಾವು?
✍️ಮಾಧವ ಅಂಜಾರು 🌷
Comments
Post a Comment