(ಲೇಖನ -26)ಮದುವೆಯ ನಂತರ -ಗಂಡಾಂತರ

ಮದುವೆಯಾದ ನಂತರ ಪಾಲಿಸಬೇಕಾದ ಮುಖ್ಯ ವಿಷಯಗಳು 



ಮದುವೆ ಎಂದರೆ ಏಕಾಂತ ಜೀವನದಿಂದ  ಪ್ರಬುದ್ಧತೆಗೆ ಬಂದು  ಜವಾಬ್ದಾರಿಯೊಂದಿಗೆ  ಒಂದು ಹೆಣ್ಣನ್ನು- ಗಂಡ ನ್ನು ವರಿಸಿಕೊಂಡು  ಸಂಸಾರ ನಡೆಸಲು  ಅಣಿಯಾಗುವುದು,  ಅವಿವಾಹಿತ ಅಥವಾ  ಅವಿವಾಹಿತೆಯೊಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟು ಎರಡು ಮನಸುಗಳನ್ನು , ಹೃದಯಗಳನ್ನು ಏರಿಳಿತ ಬರದಂತೆ ನೋಡಿಕೊಂಡು ಉಸಿರಿರುವ ತನಕ ಜೊತೆಯಾಗಿ ಬಾಳುವ ರೀತಿ ರಿವಾಜು.  

ಇಂದಿನ ದಿನಗಳಲ್ಲಿ ಮದುವೆ ಅನ್ನೋದು ಪೈಪೋಟಿ ನಡೆಸಿ ಆಚರಿಸುವ ಕಾರ್ಯಕ್ರಮವಾಗಿ ಮಾರ್ಪಡುತ್ತಿದೆ. ಮದುವೆಯ ನಿಜವಾದ ಅರ್ಥಗಳನ್ನೇ ಅರಿಯದೆ ಕೇವಲ ಮೋಜಿಗಾಗಿ ಮದುವೆ ಎಂಬ ಅರ್ಥದಲ್ಲಿ ಅದ್ದೂರಿಯಾಗಿ ಮದುವೆಗಳು ನಡೆದು ಕೇವಲ ಒಂದು ವರುಷ - ಎರಡು ವರುಷಗಳ ಒಳಗೆ ಮತ್ತು ಅದಕ್ಕಿಂತಲೂ ಕಡಿಮೆ ದಿನಗಳಲ್ಲಿ ವಿಚ್ಛೇದನೆ ಹಾದಿ ಹಿಡಿದು ಒಂಟಿಜೀವನ ಅಥವಾ ಮರುಮದುವೆಯ ಕಡೆ ಹೋಗಿ ಸಂಪೂರ್ಣ ಜೀವನವನ್ನು ನಾಶಪಡಿಸಿಕೊಳ್ಳುತ್ತಾರೆ.  

ಮದುವೆಯ ಮುನ್ನ ಗಂಡು ಮತ್ತು ಹೆಣ್ಣು ಹಲವು ಆಸೆ, ಕನಸುಗಳನ್ನು ಕಾಣುತ್ತಾ ಮದುವೆಯ ನಂತರ ಸಂಗಾತಿಯ ಗುಣಗಳನ್ನು ತಿಳಿದುಕೊಳ್ಳುವಲ್ಲಿ ವಿಫಲರಾಗಿ, ಸಣ್ಣ ಸಣ್ಣ ತಪ್ಪುಗಳನ್ನು ತಿದ್ದಿಕೊಳ್ಳದೆ ಒಬ್ಬೊರಿಗೊಬ್ಬರು ಸಂಶಯದ ವಾತಾವರಣ ಸೃಷ್ಟಿಸಿಕೊಂಡು,  ಸಪ್ತಪದಿ ಅನ್ನುವ ಪದದ ಅರ್ಥವನ್ನೇ ತಿಳಿಯದೆ ಹೆಣ್ಣೊಂದು ಬೇಗನೆ ತವರು ಮನೆಗೆ ಹೋಗಿ ತನ್ನ ಗಂಡ ಸರಿಯಿಲ್ಲ,  ಅವನಿಗೆ ಉದ್ಯೋಗವಿಲ್ಲ, ಅವನು ಕುಡಿಯುತ್ತಾನೆ, ಅವನಿಗೆ ಸರಿಯಾಗಿ ಉಡುಗೆ ಹಾಕಲು ಬರುವುದಿಲ್ಲ, ನನಗೆ ಅಲ್ಲಿ ನೆಮ್ಮದಿ ಇಲ್ಲಾ ಅನ್ನುತ್ತಾ ದೊಡ್ಡ ಸಮಸ್ಯೆಯನ್ನು ಸ್ವತಃ ಮಾಡಿಕೊಂಡು ಸಹೋದರ, ಸಂಬಂದಿಕರ ಬಳಿ ಹೇಳಿ ಮುಗಿಸಿ ತನ್ನ ಉದ್ಧಟತನವನ್ನು ತೋರಿಸಿಬಿಡುತ್ತಾರೆ. ಎರಡೂ ಸಂಸಾರದ ನೆಮ್ಮದಿಯನ್ನು ಹಾಳುಮಾಡಲು ಆರಂಭಿಸಿ ಸಮಾಜದಲ್ಲಿ ಗೌರವವಿಲ್ಲದೆ ಬದುಕು ನಡೆಸುವವರು ಇದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಿಚ್ಛೇದನೆಗೊಳ್ಳುವುದು ತನ್ನ ಹೆಂಡತಿ, ಅಥವಾ ಗಂಡನನ್ನು ಮತ್ತವರಿಗೆ ಹೋಲಿಸಿಕೊಂಡು ಅವರಲ್ಲಿ ಇಲ್ಲದ ವಸ್ತುಗಳು ನಮ್ಮಲ್ಲಿ ಇಲ್ಲವೆಂಬ ಭಾವನೆ, ವೈಮನಸೂ, ಕಿತ್ತಾಟಗಳಿಗೆ ಅವಕಾಶ ಮಾಡುತ್ತಾ ಜವಾಬ್ದಾರಿಯಿಂದ ಹೊರಗೆ ಹೋಗಿ ಬದುಕುವ ನಿರ್ಧಾರಕ್ಕೆ ಬರುವ ಯಾರೇ ಆಗಲಿ ಮದುವೆ ಅನ್ನುವ ಬಂಧನಕ್ಕೆ ಬೀಳಬಾರದು.  ಮೊದಲು ಗಂಡ, ಹೆಂಡತಿ ಅನ್ನುವ ಭಾವನೆಯನ್ನೇ ಅರ್ಥ ಮಾಡಿಕೊಳ್ಳಲು ಸಮರ್ಥರಲ್ಲದ ಜನರು ಯಾರದೋ ಒತ್ತಾಯಕ್ಕೆ ತಾಳಿ, ಪೇಟ ಹಾಕಿಕೊಂಡು ಫೋಟೋ ತೆಗಿಸಿ ಇರುವ ಹಣವನ್ನೆಲ್ಲ ಖರ್ಚು ಮಾಡಿಸಿಕೊಂಡು ಭಿಕ್ಷೆ ಬೇಡುವ ಸ್ಥಿತಿಗೆ ತಲುಪಿ, ಒಬ್ಬರಿಗೊಬ್ಬರು ದೂರುತ್ತಾ ದಿನ ತೆಗೆಯಲು ಆರಂಭಿಸಿ ಮದುವೆ ಅನ್ನುವುದನ್ನು ಜೀವನಕ್ಕೆ ದೊಡ್ಡ ಸಮಸ್ಯೆಯಾಗುವಂತೆ ಮಾಡಿಕೊಳ್ಳುತ್ತಾರೆ.  ಪರಿಸ್ಥಿತಿ ಸಂಪೂರ್ಣ ಕೆಟ್ಟು ಹೋಗುವ ಮುನ್ನ ನಡೆದು ಹೋಗಿರುವ ತಪ್ಪನ್ನು ತಿದ್ದಿ, ಗುರುಹಿರಿಯರು ಇದ್ದಲ್ಲಿ ಒಂದೊಳ್ಳೆ ಮಾತುಗಳನ್ನು ಆಡುತ್ತ ಏನು ಬೇಕು ಏನು ಬೇಡ ಎಂಬ ವಿಷಯಗಳ ಬಗ್ಗೆ ಚರ್ಚಿಸಿ ಬಂಧನವನ್ನು ಸುಭದ್ರಗೊಳಿಸಲು ಪ್ರಯತ್ನ ಮಾಡಬೇಕೆ ಹೊರತು ಇನ್ನೊಬ್ಬರ ಜೀವನದಲ್ಲಿ ಆಟವನ್ನಾಡಿ ವಿಕೃತಿ ಮೆರೆಯುವ ಗಂಡಾಗಲಿ, ಹೆಣ್ಣಾಗಲಿ ಮದುವೆ ಅನ್ನುವ ನಿರ್ಧಾರಕ್ಕೆ ಬರಬೇಡಿ. ಜೀವನದ ನಡುವೆ ಆಟವನ್ನಾಡಿ ತನ್ನ ಜೀವನವನ್ನು ನರಕಕ್ಕೆ ಹಾಕಿಕೊಳ್ಳಬೇಡಿ.  

ಹೌದು,  ಒಂದೊಂದು ವಿಷಯಗಳು, ಘಟನೆಗಳು ವಿಚ್ಛೇದನಯ ದಾರಿ ತೋರಿಸುತ್ತದೆ,  ಸಮಸ್ಯೆಗಳು ಬಗೆಹರಿಸಿಕೊಳ್ಳಲು ಸಾಧ್ಯವಾಗದಷ್ಟು ಇರುತ್ತವೆ ಆದರೆ ಮದುವೆಯ ನಂತರ,  ಗಂಡ ಕೆಲಸ ಕಳೆದುಕೊಂಡರೆ, ಅವರಂತೆ ಇವರಿಲ್ಲ, ವಿದ್ಯಾವಂತನಲ್ಲ, ಬಟ್ಟೆ ಸರಿಯಾಗಿ ಉಡುವುದಿಲ್ಲ,  ಮಾಡರ್ನ್ ಆಗಿ ಇಲ್ಲಾ,  ಬೇಕಾಬಿಟ್ಟಿ ತಿರುಗಾಡಲು ಬಿಡೋದಿಲ್ಲ, ಸ್ವಂತ ಮನೆಯಿಲ್ಲ ಎಂಬ ಕಾರಣ. ಹೆಣ್ಣು ಸುಂದರಿಯಲ್ಲ,  ನಿನಗಿಂತ ಅವಳು ಚೆಂದ, ಅವರಂತೆ ನೀನಿಲ್ಲ ಎಂಬ ಕಾರಣಗಳಿಗೆ ಅದೆಷ್ಟು  ಜನರು ಕೆಟ್ಟ   ನಿರ್ಧಾರಕ್ಕೆ ಬರುತ್ತಾರೆ.  ಇಂತಹವೆರೆಲ್ಲ ಒಂದೋ ಮಾಹಿತಿಯ ಕೊರತೆ ಅಥವಾ ಮಾನಸಿಕವಾಗಿ ಸದೃಢರಾಗಿರದೆ ಚಿಕ್ಕ ತೊಂದರೆಯನ್ನು ದೊಡ್ಡದೆಂದು ಭಾವಿಸಿ ಇನ್ನಷ್ಟು ದೊಡ್ಡ ತೊಂದರೆಯಾಗಿ ಮಾರ್ಪಡಿಸಿಕೊಳ್ಳುತ್ತಾರೆ.  

ಕೊನೆಗೆ ಎಲ್ಲಾ ತೊಂದರೆಗಳಿಗೆ ಅವರೇ ಮುಖ್ಯವಾಗಿರುತ್ತಾರೆ, ಕೆಲವು ಮುಖ್ಯ ವಿಚಾರದಲ್ಲಿ ಮದುವೆಯಾದ ಮೇಲೆ ಗಮನವಿರಲಿ,  ಹೆಣ್ಣಾಗಲಿ - ಗಂಡಾಗಲಿ ಮದುವೆಯ ನಂತರ ಅನ್ಯರ ಮೋಹಕ್ಕೆ ಬಲಿಯಾಗಬೇಡಿ,  ಅನ್ಯರ ಹಣಕ್ಕೆ ಆಸೆ ಪಡಬೇಡಿ,  ಅನ್ಯರ ಸೌಂದರ್ಯಕ್ಕೆ ಮಾರು ಹೋಗಬೇಡಿ, ಅನೈತಿಕ ಸಂಬಂಧ ಇಟ್ಟುಕೊಳ್ಳಬೇಡಿ,  ಆಕಸ್ಮಿಕವಾಗಿ ಬಲಿಯಾಗಿದ್ದಲ್ಲಿ ಬೇಗನೆ ಹೊರಗೆಬರುವ ಪ್ರಯತ್ನ ಮಾಡಿ ತನ್ನ ಸಂಸಾರದ ಜವಾಬ್ದಾರಿ ಹೊತ್ತುಕೊಳ್ಳಿ.  ಮದುವೆಯ ನಂತರ ಗಂಡ ಹೆಂಡತಿಯನ್ನು,  ಹೆಂಡತಿ ಗಂಡನನ್ನು ಪ್ರಾಶಸ್ತ್ಯ ಕೊಡುವುದನ್ನು ಮರೆಯಬೇಡಿ, ಅಪ್ಪ ಅಮ್ಮನ ನೋವಿಗೆ ಕಾರಣರಾಗದೆ ಆದಷ್ಟು ಒಳ್ಳೆಯ ರೀತಿಯಲ್ಲಿ ಬದುಕು ನಡೆಸುವ ವಿಧಾನಗಳನ್ನ ಅಳವಡಿಸಿಕೊಳ್ಳಬೇಕು.  ಕೆಲವೊಬ್ಬರು ಸಂಸಾರವನ್ನು ಹಾಳು ಮಾಡಲು ಹಾತೊರೆಯುತ್ತಾರೆ ಅಂತವರನ್ನು ಆದಷ್ಟು ದೂರವಿಡಿ,  ಮನಸ್ತಾಪಗಳನ್ನು ಹಂಚಿಕೊಳ್ಳಬೇಡಿ,  ಕೋರ್ಟು ಕಾನೂನು, ಪೊಲೀಸು ಕಚೇರಿಗಳ ಅಲೆದಾಟದಲ್ಲಿ ಸಂಪೂರ್ಣ ಜೀವನ ಹಾಳು ಮಾಡಿಕೊಳ್ಳಬೇಡಿ. 

ಜವಾಬ್ದಾರಿಯುತ ಗಂಡು ಹೆಣ್ಣು ಯಾವುದೇ ಸಮಸ್ಯೆ ಬಂದಾಗ ಬಗೆಹರಿಸಿ ಮುನ್ನಡೆಯುವ ಶಕ್ತಿ ಹೊಂದುತ್ತಾರೆ. ಬೇಜವಾಬ್ದಾರಿ ಗಂಡು ಹೆಣ್ಣು ಸಮಸ್ಯೆಗಳನ್ನು ಹುಟ್ಟುಹಾಕಿ  ಸಮಸ್ಯೆಗಳ ಸುಳಿಯಲ್ಲಿ ಮುಳುಗಿಬಿಡುತ್ತಾರೆ.  

ಈ ಕೆಳಗಿನ ಕೆಲವು ಮಾಹಿತಿಯನ್ನು ಮನದಲ್ಲಿಟ್ಟುಕೊಳ್ಳ ಬಹುದು.  

* ತನ್ನ ಗಂಡ ಅಥವಾ ಹೆಂಡತಿಯ ಎದುರಿಗೆ ಇನ್ನೊಬರ ಗಂಡ ಹೆಂಡತಿಯನ್ನು ಹೊಗಳಬೇಡಿ *

 ತಪ್ಪುಗಳನ್ನು ಮಾಡುತ್ತಿದ್ದಲ್ಲಿ ಸರಿಯಾದ ರೀತಿಯಲ್ಲಿಯೇ ಹೇಳಿ ಬಿಡಿ, ತಪ್ಪುಗಳು ಮರುಕಳುಹಿಸಿ ದರೆ ಹೊಡೆದು, ಮತ್ತಿತ್ತರ ಜೀವಕ್ಕೆ ಅಪಾಯವಾಗುವ ಕೆಲಸಕ್ಕೆ ಕೈ ಹಾಕಬೇಡಿ 

*ಯಾವುದೇ ಕ್ಷಣಕ್ಕೂ ಕೆಟ್ಟದಾಗಿ ಮಾತನಾಡಬೇಡಿ 

* ಸಂಶಯಗಳಿಗೆ ದಾರಿ ಮಾಡಿಕೊಡಬೇಡಿ,  ಇಬ್ಬರೂ ಬಿಚ್ಚುಮನಸ್ಸಲ್ಲಿ ಮಾತಾಡುತ್ತ, ನಗುತ್ತಿರಬೇಕು. 

*ಮನೆಯಲ್ಲಿ ದೇವರ ಭಕ್ತಿಯನ್ನು ಒಟ್ಟಿಗೆ ಸೇರಿ ಮಾಡಿಕೊಳ್ಳಿ 

*ಅಡುಗೆ,  ಮತ್ತಿತರ ಮನೆಕೆಲಸಗಳಲ್ಲಿ ಭಾಗಿಯಾಗಿ. 

*ಆಗೊಮ್ಮೆ ಈಗೊಮ್ಮೆ ತಮ್ಮ ಹೆಂಡತಿ,  ಗಂಡನನ್ನು ಹೊಗಳಿಕೊಳ್ಳಬೇಕು. 

*ಕ್ರೈಮ್ ಸ್ಟೋರಿ,ಕ್ರೈಮ್  ಪುಸ್ತಕ ಓದಬೇಡಿ,  ಭಜನೆ, ದೇವರ ಗೀತೆಗಳನ್ನು, ಕಥೆಗಳನ್ನು, ಬರೆಯುವ ಓದುವ ಹವ್ಯಾಸ ಮಾಡಿಕೊಳ್ಳಿ. 

*ಆದಷ್ಟು ನ್ಯೂಸ್ ಚಾನೆಲ್ ಗಳಿಂದ, ಸಾಮಾಜಿಕ ಜಾಲತಾಣ ದ ಕೆಟ್ಟ ವಿಚಾರದಲ್ಲಿ ತಲೆಹಾಕಬೇಡಿ.  

ಗಂಡ ಹೆಂಡಿರ ಸಮಸ್ಯೆಯಲ್ಲಿ, ಯಾರೂ ಕೂಡ ಭಾಗಿಯಾಗಲು ಆಗೋದಿಲ್ಲ, ಭಾಗವಹಿಸುವಿಕೆಗೆ ಅವಕಾಶ ಕೂಡ ಮಾಡಿ ಕೊಡಬೇಡಿ,  ಯಾವಾಗಲೂ ನಿಮ್ಮ ಒಳಿತಿಗಾಗಿ ಮಾತು ಹೇಳುವವರಲ್ಲಿ ಪರಿಹಾರ ಕೇಳಿಕೊಳ್ಳಿ, ಆದರೆ ಇಬ್ಬರಿಗೂ ತೊಂದರೆಯಾಗದಂತೆ ವ್ಯವಹರಿಸಿಕೊಳ್ಳಿ. 

ಅಮ್ಮನ ಪ್ರೀತಿ, ಅಪ್ಪನ ಪ್ರೀತಿ, ಅಣ್ಣ ತಮ್ಮನ ಪ್ರೀತಿ ಎಲ್ಲವನೂ ತನ್ನ ಹೆಂಡತಿ ಅಥವಾ ಗಂಡನಲ್ಲಿ ಕಾಣುತ್ತಾ, ವೈವಾಹಿಕ ಜೀವನದ ಆನಂದ ಪಡೆದುಕೊಳ್ಳಿ.  ನಿಜವಾದ ಸಂಬಂಧಗಳ ಬೆಲೆಯನ್ನು ಉಳಿಸಿಕೊಳ್ಳಿ. 

ಮಾಧವ ನಾಯ್ಕ್ ಅಂಜಾರು 

(ಮೇಲಿನ ಬರವಣಿಗೆ ಯಾವುದೇ ಓದುಗಾರರಿಗೆ ನೇರವಾಗಿ ಅಥವಾ ವಿರುದ್ಧವಾಗಿ ಬರೆದಿಲ್ಲ, ಕನ್ನಡ ಶಬ್ದಗಳ ಜೋಡಣೆ ಕನ್ನಡದ ಪೋಷಣೆಗಾಗಿ ಆದಷ್ಟು ಸಾಮಾಜಿಕ ಕಾಳಜಿಯ ಬರವಣಿಗೆ, ಒಳಿತನ್ನು ಸ್ವೀಕರಿಸಿ ತಪ್ಪನ್ನು ತಿದ್ದಿ ಕನ್ನಡವನ್ನು ಪ್ರಪಂಚಕ್ಕೆ ತಿಳಿಸಿ )








Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.