ದುಃಖ (ಕವನ -89)

 ದುಃಖ 

*****

ಒಂದಲ್ಲ ಒಂದು ದಿನ

ಪ್ರತಿಜೀವಿಗೂ ಸಾವು ಬಂದೇ ಬರುತ್ತದೆ

ಬದುಕು ಕೊನೆಗೊಳ್ಳುವ ತನಕ

ಸಂತೋಷ, ನೋವು ಇದ್ದೇ ಇರುತ್ತದೆ


 ಮನುಷ್ಯನ ಸಾವು-ನೋವು

 ಸಂಬಂಧ, ಸಮಾಜ, ಗೆಳೆಯ-ಗೆಳತಿಯರಿಗೆ

 ದುಃಖವನ್ನು ತಂದುಬಿಡುತ್ತದೆ

 ಸತ್ಕಾರ್ಯ ಮಾತ್ರ ಉಳಿದುಬಿಡುತ್ತದೆ


 ಎಷ್ಟೇ ಗಳಿಸಿದರು, ಉಳಿಸಿದರೂ 

 ಇಂದಲ್ಲ ನಾಳೆ ಸಾವು ಬಂದೇ ಬರುತ್ತದೆ

 ಸುತ್ತಲಿನ ಸಮಾಜಕ್ಕಾಗಿ ಮಾಡುವ

 ಒಳಿತು ಮಾತ್ರ ಇದ್ದುಬಿಡುತ್ತದೆ

       ✍️ ಮಾಧವ ನಾಯ್ಕ್ ಅಂಜಾರು 🌹

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ