ಕನಸಿನ ರಾಣಿ (ಕವನ -60)
ಮಾಯಾಜಿಂಕೆ ನೀನು
ಆಗೊಮ್ಮೆ ಈಗೊಮ್ಮೆ
ಕಣ್ಣೆದುರಿಗೆ ಬಂದು
ಓಡಾಡುತ್ತಿರುವೆ ಏನು?
ಮೀನಾಕ್ಷಿಯೇ ನೀನು
ಕಣ್ಣ ಮಿಟುಕಿಸುವ ನೋಟ
ಸಾರಿ ಹೇಳುತಿದೆನಗೆ
ಸೌಂದರ್ಯದ ಅರ್ಥವೇನು?
ಹಂಸವೇ ನೀನು
ನಿನ್ನ ಹೆಜ್ಜೆಯ ಗೆಜ್ಜೆನಾದಕೆ
ಸರಿಸಾಟಿ ಕಾಣೆನು
ಎನ್ನ ಕನಸಿನ ರಾಣಿ ನೀನು
✍️ಮಾಧವ ಅಂಜಾರು 🌷
Comments
Post a Comment