ನವರಾತ್ರಿ (ಕವನ -82)
ನವರಾತ್ರಿ
*******
ನವದಿನದ ನವರಾತ್ರಿಯಲಿ
ನವದುರ್ಗೆಯು ಹಾರೈಸಲಿ
ನವ ಕನಸಿನ ನವ ಆಸೆಗಳ
ನವದುರ್ಗೆಯು ಆಲಿಸಲಿ
ನವ ಹೂವಲಿ ನವ ಫಲದಲಿ
ನವದುರ್ಗೆಯ ಪೂಜಿಪೆ
ನಲಿದಾಡುತ ಭಕ್ತಿಯಿಂದ
ನವ ದುರ್ಗೆಗೆ ಕರಮುಗಿವೆ
ನವ ಬಣ್ಣದಲಿ ನವ ರತ್ನದಲಿ
ನವಬಗೆಯಲಿ ಸಿಂಗರಿಸಿ
ನವದುರ್ಗೆಯ ಚರಣಕೆರಗಿ
ನವದಿನದ ಶುಭಕೋರುವೆ
✍️ಮಾಧವ ಅಂಜಾರು 🌷
Comments
Post a Comment