ಸಾಧನೆ (ಕವನ -76)
ಸಾಧನೆ
******
ನಿಮ್ಮ ಸಾಧನೆ
ಸಮಾಜ ಗುರುತಿಸಿಕೊಳ್ಳಲೆಂದು
ಸಾಧಿಸಲು ಶ್ರಮಿಸಬೇಡಿ
ನಿಮ್ಮ ಸಾಧನೆ
ಸಮಾಜ ಗುರುತಿಸಲಿಲ್ಲವೆಂದು
ಸಾಧನೆಯ ನಿಲ್ಲಿಸಬೇಡಿ,
ಪ್ರತಿಯೊಬ್ಬರ ಸಾಧನೆ
ಮೌಲ್ಯಗಳನ್ನು ಹೊಂದಿರುತ್ತದೆ
ಅವರವರ ಶಕ್ತಿಗೆ ತಕ್ಕಂತೆ
ಮಾಡಿರಬಹುದು ಸಾಧನೆ
ಅವರವರ ಯುಕ್ತಿಗೆ ತಕ್ಕಂತೆ
ಮಾಡಬಹುದು ಸಾಧನೆ
ಬಡವನಾಗಿದ್ದರೆ
ದಿನದ ಅನ್ನವನು ಗಳಿಸೋದು
ಬಹುದೊಡ್ಡ ಸಾಧನೆ
ಅಮಾಯಕನಾಗಿದ್ದರೆ
ಇಂದಿನ ಸಮಾಜದಲ್ಲಿ
ಬದುಕಿ ತೋರಿಸೋದೇ ಸಾಧನೆ
✍️ಮಾಧವ ಅಂಜಾರು 🙏
Comments
Post a Comment