ವರ್ತನೆ (ಕವನ -64)

ವರ್ತನೆ ಸರಿಯಿರದಿದ್ದರೆ
ಯಾವ ಸ್ಥಾನವಿದ್ದರೇನು?
ನರ್ತನ ಅರಿಯದಿದ್ದರೆ
ತಾಳದ ಅಗತ್ಯವೇನು?

ಜವಾಬ್ದಾರಿ ತಿಳಿಯದಿದ್ದರೆ
ಬದುಕಿಗೆ ಅರ್ಥವೇನು ?
ಅಹಂಕಾರ ತುಂಬಿದ್ದರೆ
ಕನಸಿಗೆ ಅರ್ಥವೇನು?

ಮಾತು ಅರಿಯದಿದ್ದರೆ
ವಿದ್ಯೆಯ ಬೆಲೆಯೇನು?
ಸರಿತಪ್ಪು ತಿಳಿಯದಿದ್ದರೆ
ಮಾನವಜನ್ಮ ಬೇಕೇನು?
    ✍️ಮಾಧವ ಅಂಜಾರು 🌷

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ