ತಿಳುವಳಿಕೆ (ಕವನ -42)
ಸಂಸ್ಕಾರ ಇಲ್ಲದವಳು
ಹಸೆಮಣೆ ಏರಬಾರದು
ಜವಾಬ್ದಾರಿ ಇಲ್ಲದವರು
ಸಂಸಾರ ಮಾಡಬಾರದು
ಸಹನೆ ಇಲ್ಲದವಳು
ಮಕ್ಕಳನ್ನು ಹೇರಬಾರದು
ಪ್ರೀತಿಯೇ ಇಲ್ಲದವನು
ಗಂಡನಾಗಿ ಇರಬಾರದು
ನ್ಯಾಯ ಅರಿಯದವನು
ನ್ಯಾಯವಾದಿ ಆಗಬಾರದು
ಸತ್ಯವಿಮರ್ಶೆ ತಿಳಿಯದವನು
ನ್ಯಾಯಾಧೀಶ ಆಗಬಾರದು
✍️ಮಾಧವ ನಾಯ್ಕ್ ಅಂಜಾರು 🌷
Comments
Post a Comment