ನಮ್ಮದಾಗಲಿ ಸೌಭಾಗ್ಯ (ಕವನ -40)
ಅಂತೂ ಬಂತು ಹೊಸವರುಷ
ಕಳೆದು ಹೋದ ದಿನಗಳ ನೆನೆಸಿದರಂತು
ಈ ವರುಷ ಬದುಕಿದ್ದೆ ಒಂದು ಭಾಗ್ಯ
ಸಾವಿರಾರು ಸಾವು, ನೋವು
ದುರ್ಘಟನೆಗಳ ಸರಮಾಲೆ
ನಮ್ಮದಾಯ್ತು ದೌರ್ಭಾಗ್ಯ
ನಮ್ಮದಾಗಲಿ ಸೌಭಾಗ್ಯ
ಹರುಷ ತರಲಿ ದಿನನಿತ್ಯ
ಹೊಸವರುಷ ನಮ್ಮೆಲ್ಲರ ಭಾಗ್ಯ
ಮನ್ನಿಸೆನ್ನ ತಪ್ಪುಗಳ
ಲಾಲಿಸೆನ್ನ ಸಿಹಿ ಮಾತುಗಳ
ಎನ್ನ ಕಣ್ಣಾಗು ನೀ ಮುಂದಿನ ದಿನಗಳಲಿ
ನಿಮಗೂ ನಿಮ್ಮವರಿಗೂ
ಹೊಸ ವರುಷದ ಶುಭಾಶಯಗಳು
ಪ್ರೀತಿಯೊಂದಿಗೆ
✍️ಮಾಧವ ನಾಯ್ಕ್ ಅಂಜಾರು 🌷
Comments
Post a Comment