ದೇವ ರಚಿತಾ (ಕವನ -54)

ದೇವ ರಚಿತಾ ಈ ಭುವಿಗೆ
ನಿನ್ನ ಆಗಮನ ಸುಲಲಿತ
ಆ ನಿನ್ನ  ಮೊಗದ ಸೊಬಗಿಗೆ
ನಾನಾದೆನು ವಿಚಲಿತ

ಪ್ರತಿ ಕ್ಷಣಕೂ ಕಣ್ಣೆದುರಿಗೆ
ಬರುವ ನಿನ್ನ ಮುಗುಳುನಗೆ
ಮರೆಮಾಚಿತು ನನ್ನೆಲ್ಲ
ಚಿಂತೆಗಳ ಸರಮಾಲೆ

ಬಾನಂಗಳದ ಮಲ್ಲಿಗೆ
ಎನ ಜೀವದ ಸಂಪಿಗೆ
ಎಂದಿಗೂ ಜೊತೆಗಿರು
ಪರಿಮಳದ ಕಾಡ ಸಂಪಿಗೆ
     ✍️ಮಾಧವ ಅಂಜಾರು 🌷







Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ