(ಲೇಖನ -29)ಸಂಕೋಲೆ ತಕ್ಕಡಿ

 

ಸಂಕೋಲೆಯ ತಕ್ಕಡಿ


ಸಂಕೋಲೆಯ ತಕ್ಕಡಿ ಸರಿದೂಗಿಸಲು ಸಮಯ ಬೇಕಾಗುತ್ತದೆ,  ತೂಗಿ ಕೊಡುವ ವಸ್ತುಗಳು ನಿಖರವಾಗಿರಬೇಕಾಗಿದ್ದರೆ ತೂಗುವವನು ಜಾಣ್ಮೆಯಿಂದ,  ಸಮಾಧಾನದಿಂದ ಇರಲೇಬೇಕು ಇಲ್ಲವಾದಲ್ಲಿ ತೂಕ ಸರಿಯಾಗುವುದಿಲ್ಲ. ಬೆಲೆಯೂ ಸರಿಯಾಗಿರುವುದಿಲ್ಲ. 

ನಮ್ಮ ಜೀವನವು ಕೂಡ  ಒಂದು ತರ ಮನಸುಗಳನ್ನು  ಕೊಂಡು ಕೊಳ್ಳುವಿಕೆ,  ಸರಿದೂಗುವಿಕೆ,  ಜಾಗ್ರತೆಯಿಂದ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಕೈಯಲ್ಲಿ ಇರುತ್ತದೆ.  ಆದರೆ ಇದರಲ್ಲಿ ಪ್ರತಿಯೊಬ್ಬ ಸಂಸಾರದ ಸದಸ್ಯನ ಪಾತ್ರ ಮಹತ್ವ ಪಡೆದಿರುತ್ತದೆ.  ಒಂದು ಸಂಸಾರದಲಿ ಒಬ್ಬ ಕೂಡ ಏರಿಳಿತ ಆದರೂ ಕೂಡ ಎಲ್ಲರೂ ತೊಂದರೆಗೆ ಒಳಗಾಗುವ ಪ್ರಸಂಗಗಳು ನಡೆಯುತ್ತವೆ.  ತೂಗು ತಕ್ಕಡಿಯು ಅಲುಗಾಡುತ್ತಲೇ ಇರುತ್ತದೆ. 

ಸಾಮನ್ಯವಾಗಿ,  ನಮ್ಮ ದಿನಚರಿಗಳಲ್ಲಿ ನಡೆಯುವ ಮನಸ್ತಾಪ,  ಕೋಪಗಳಿಗೆ ಸ್ವತಃ ಕಾರಣರಾಗದಂತೆ ನೋಡಿಕೊಂಡು ಸಂಸಾರವನ್ನು ಒಳ್ಳೆಯ ರೀತಿಯಲ್ಲಿ ಕೊಂಡುಹೋಗುವ ಜವಾಬ್ದಾರಿ ಪ್ರತೀ ಸದಸ್ಯನದ್ದು ಆಗಿರುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ಇದ್ಯಾವುದೂ ನಡೆಯುತ್ತಿಲ್ಲ,  ನಡೆಯುತ್ತಿದ್ದರೂ ಬಹಳ ವಿರಳ ಸಂಖ್ಯೆಯಲ್ಲಿ ಇವೆ.  ಸಂಸ್ಕಾರದ ಅಡಿಯಲ್ಲಿ ಬದುಕದೆ ಇರುವ ಜೀವ ಸಂಸಾರ ನಡೆಸಲು ಹರಸಾಹಸ ಪಡೆಯಬೇಕಾಗುತ್ತದೆ.  ಒಂದುವೇಳೆ ಸಂಸ್ಕಾರವಿಲ್ಲದೆ ಬದುಕಿದರೂ ಸಂಸಾರ ನಡೆಸುವಲ್ಲಿ ವಿಫಲರಾಗುತ್ತಾರೆ. 

ಪ್ರಪಂಚದಲ್ಲಿ ಟೆಕ್ನಾಲಜಿ  ಎಷ್ಟೇ ಮುಂದುವರಿದರೂ   ಸಂಸ್ಕಾರ ಅರಿಯದೆ  ಇರುವ ಸದಸ್ಯನು ಬೂದಿ ಮುಚ್ಚಿದ ಕೆಂಡದಂತೆ ಅಥವಾ ಹೃದಯಕ್ಕೆ ಚುಚ್ಚಿದ ಸೂಜಿಯಂತೆ. ಮನೆಗಳಲ್ಲಿ,  ಮನಗಳಲ್ಲಿ ಸಂಸ್ಕಾರದ ದೀಪ ಬೆಳಗಲಿ ಮನುಜನ ಮನಸುಗಳು ಹೂವಾಗಿ, ನೆರಳಾಗಿ ಇರಲಿ. 

ಗೌರವಿಸಬೇಕು,  ಗೌರವ ಪಡೆಯಬೇಕು, ಅಗೌರವ ಮಾಡುವವರ ಹತ್ತಿರ ಸುಳಿಯದಿರಬೇಕು.  ಕತ್ತಲಾಗುತ್ತಿದ್ದಂತೆ ದೇವರ ದೀಪ ಹಚ್ಚಬೇಕು,  ಮಕ್ಕಳಿಗೆ ದೇವರಲಿ  ಕೈ ಮುಗಿದು ಬೇಡುವ ಬುದ್ದಿ ಕಲಿಸಬೇಕು, ಏರು ದನಿಯ ಮಾತನು ಬಿಡಬೇಕು,  ಗುರು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಬೇಕು.  ಒಳ್ಳೆಯ ಪುಸ್ತಕಗಳನ್ನು ಓದಬೇಕು  ಮನೆಗೆ ಮಾದರಿಯಾಗಿ ಬಾಳುವ ನೀತಿ ಕಲಿಸಬೇಕು. 

ಇನ್ನೊಬ್ಬರ ನೋವನು ಅರ್ಥ ಮಾಡುವುದನ್ನು ಕಲಿಯಬೇಕು,  ಅನ್ಯರ ಮನೆಗೆ ಬೆಂಕಿ ಹಾಕುವುದನ್ನು ಕಲಿಸದೇ ಇರಬೇಕು.  ಆಸೆಗಳ ದಾಸರಾಗಿ ತಮ್ಮ ತಮ್ಮ ಸಂಸಾರದ ತೂಗುಗತ್ತಿ ತಾವೇ ಆಗಿಹೋಗುವಮುನ್ನ ಎಚ್ಚೆತ್ತು ಬದುಕಬೇಕು. ತೂಗು ತಕ್ಕಡಿ ಸರಿದೂಗಿಸಬೇಕು. 

✍️ಮಾಧವ ನಾಯ್ಕ್ ಅಂಜಾರು 🙏🌹





Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ