ಜೊತೆಯಲಿ (ಕವನ -81)

 

ಜೊತೆಯಲಿ
*******
ಸಾಧ್ಯವಿದ್ದರೆ
ಜೊತೆಯಲ್ಲಿರುವವರ
ಮುಖದಲ್ಲಿ ನಗು ಬರಿಸಿ
ಸಾಧ್ಯವಿದ್ದರೆ
ಜೊತೆಯಲ್ಲಿರುವವರ
ಕಷ್ಟದಲ್ಲಿ ಭಾಗಿಯಾಗಿ

ಸಾಧ್ಯವಿದ್ದರೆ
ಜೊತೆಯಲ್ಲಿ ಇರುವವರ
ಮನಸು ಅರ್ಥಮಾಡಿಕೊಳ್ಳಿ
ಸಾಧ್ಯವಿದ್ದರೆ
ಜೊತೆಯಲ್ಲಿ ಇರುವವರ
ಕೈ ಹಿಡಿದು ನಡೆಸಿ

ಸಾಧ್ಯವಿದ್ದರೆ
ಜೊತೆಯಲ್ಲಿ ಇರುವವರ
ತಪ್ಪನು ತಿದ್ದಿಬಿಡಿ
ಸಾಧ್ಯವಿದ್ದರೆ
ಜೊತೆಯಲ್ಲಿ ಇರುವವರ
ದ್ವೇಷ ಮರೆಸಿಬಿಡಿ
      ✍️ಮಾಧವ ಅಂಜಾರು 🙏


Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ