ಸಿಹಿಮುತ್ತು (ಕವನ -57)
ಸಮುದ್ರದಾಳದ ಮುತ್ತು ನೀನು
ಎನ್ನ ಬಾಳಿನುಸಿರೆ ನೀನು
ನೀನಿಲ್ಲದೆ,ನಾನಿದ್ದರೆ
ಎನ್ನ ಜೀವದ ಪಾಡೇನು!
ಬಾನಂಗಳದ ಮಿಂಚು ನೀನು
ಮೋಡಗಳ ಮಿಲನದ
ಮಳೆಹನಿಯು ನೀನು
ಧರೆಗಿಳಿದ ಸಮಯ ಹರುಷವೇನು!
ಹೂದೋಟದ ನಡುವೆ
ಕಂಗೊಳಿಸುವ ಗುಲಾಬಿ ನೀನು
ನಿನಗಾಗಿ ಬಂದಿರೋ ದುಂಬಿ ನಾನು
ಸಿಹಿಮುತ್ತ ಕೊಟ್ಟು ಬಿಡುವೆಯೇನು?
✍️ಮಾಧವ ಅಂಜಾರು 🌷
Comments
Post a Comment