ಭರವಸೆ (ಕವನ -88)
ಭರವಸೆ
*******
ಬದುಕಿದರೆ ಇನ್ನು ಕೇವಲ
ನಾಲ್ಕುದಿನವೆಂದೇ ಬದುಕಬೇಕು
ಐದನೆಯ ದಿನ ಸಿಕ್ಕಿದರೆ
ಮತ್ತೆ 4 ದಿನವೆಂದೇ ಬದುಕಬೇಕು
ಜೀವನದಲ್ಲಿ ಆಸೆಗಳು ಇರಬೇಕು
ನಾಲ್ಕು ದಿನ ಬದುಕು ನಡೆಸುವೆ ನೆಂಬ
ಭರವಸೆಯಲ್ಲಿ ಜೀವನ ಸಾಗಿಸಬೇಕು
ದುರಾಸೆಗೆ ಸಿಕ್ಕಿಬೀಳದಂತೆ ಇರಬೇಕು
ಬದುಕಿದರೆ ಮೂರು ದಿನವೆಂದೇ ಬದುಕಬೇಕು
ನಾಲ್ಕನೆಯ ದಿನ ಸಾಯುತ್ತೇನೆಂದು ತಿಳಿದಾಕ್ಷಣ
ಮತ್ತೆ ಹುಟ್ಟಿ ಬರುವೆನೆಂಬ ಧೈರ್ಯದಲಿ
ಇರುವ ಮೂರು ದಿನ ನಗುತ್ತಾ ಇರಬೇಕು
✍️ ಮಾಧವ ನಾಯ್ಕ್ ಅಂಜಾರು🙏🌹
Comments
Post a Comment