ಭಾಗ್ಯ (ಕವನ -72)
ಭಾಗ್ಯ
*****
ನೀನೆನ್ನ ಗೆಳೆಯನಾಗಿದ್ದರೆ
ಅದೆನ್ನ ಭಾಗ್ಯ
ನೀನೆನ್ನ ಗೆಳತಿಯಾಗಿದ್ದರೆ
ಅದೂ ಎನ್ನ ಸೌಭಾಗ್ಯ,
ನೀ ಎನ್ನ ಪ್ರೀತಿಸುತಿದ್ದರೆ
ಅದೆನ್ನ ಭಾಗ್ಯ
ನೀ ಎನ್ನ ದ್ವೇಷಿಸುತಿದ್ದರೆ
ಅದೆನ್ನ ದೌರ್ಭಾಗ್ಯ,
ನೀನೆನ್ನ ರಕ್ಷಕನಾಗಿದ್ದರೆ
ಅದೂ ದೊಡ್ಡ ಭಾಗ್ಯ
ನೀನೆನ್ನ ಪ್ರೇಕ್ಷಕನಾಗಿದ್ದರೆ
ನಾ ಪಡೆದ ಭಾಗ್ಯ
✍️ಮಾಧವ ಅಂಜಾರು 🌷
Comments
Post a Comment