ಕವಿ -ಗಿಣಿ (ಕವನ -91)
ಕವಿ - ಗಿಣಿ
********
ಗಿಣಿಯು ನೀನೆ
ರಾಣಿಯು ನೀನೇ
ಕವಿಕಂಡ ಸೌಂದರ್ಯದ
ಚೆಂಗುಲಾಬಿ ನೀನೆ,
ರವಿಯಂತೆ ನಾನು
ಭುವಿಯಂತೆ ನೀನು
ಆಟವಾಡುವ ತವಕ
ಎನ ಮನದಲಿ ನೀನು
ಮರೆಯಲ್ಲಿ ನಿಂತು
ಹೃದಯವ ಕೊರೆದರೆ
ಸರಿಯಾಗಿ ಸಿಗುವುದೇ
ಬಯಸಿದ ಪ್ರೀತಿಯು
ಬಳಿಬಂದು ಹಣೆಸವರು
ಪಿಸುಗುಟ್ಟು ನನ್ನ ಹೆಸರು
ಉಸಿರಲ್ಲಿ ಉಸಿರಾಗಿ
ಹೇಳಿಬಿಡು ನೀ ನನ್ನುಸಿರು
✍️ಮಾಧವ ನಾಯ್ಕ್ ಅಂಜಾರು 🙏
Comments
Post a Comment