ನಿನಗಾಗಿ ಕವನ (ಕವನ -41)

ನಿನ್ನ ನಗುವಿಗೆ ನೀನೆ ಕಾರಣ
ನಿನ್ನ ನಗುವೇ ನಿನಗೆ ಭೂಷಣ  
ನಗಬೇಕಾದರೆ ಬೇಕು ಕಾರಣ
ನಗು ನಗುತಾ ಸಾಗಲಿ ಜೀವನ

ನಿನ್ನ ನಗುವಲಿ ನನ್ನ ಚಾರಣ
ನಿನ್ನ ಮೊಗದಲಿ ಸಾವಿರ ಗುಣ
ನಿನ್ನೊಂದಿಗೆ ಇರುವ ಕಾರಣ
ಎನ್ನ ಬದುಕು ಹಸಿರು ತೋರಣ

ನಿನಗಾಗಿಯೇ ನನ್ನ ಈ ಪ್ರಾಣ
ಸಣ್ಣ ಸಣ್ಣ ಜಗಳ ಬಣ್ಣ
ಹೊನ್ನಂತೆ ನಿನ್ನ ಈ ಕವನ
ಬೆಳಗುತಲಿರಲಿ ಜೀವನ ಕವನ
      ✍️ಮಾಧವ ನಾಯ್ಕ್ ಅಂಜಾರು 🌷
         








Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ