ಪರದೇಶದ ತುತ್ತು (ಲೇಖನ - 47)

 ಪರದೇಶದ ತುತ್ತು

***************

 ನಾವಂದುಕೊಂಡಂತೆ ಪ್ರಪಂಚವಿಲ್ಲ, ಜೀವನ ಬೇವು ಬೆಲ್ಲ ಇವೆಲ್ಲ ಹೇಳುವುದಕ್ಕೆ ಕೇಳುವುದಕ್ಕೆ ಬಹಳ ಸುಲಭವಾಗಿದ್ದರೂ ಕೂಡ ಈ ಮಾತು  ಅದೆಷ್ಟು ಒಳಾರ್ಥವನ್ನು ಹೊಂದಿರುತ್ತದೆ. ಜೀವನ ಸಾಗಿಸಲು ಹುಟ್ಟಿದಂದಿನಿಂದ ಪ್ರಯತ್ನ ಪ್ರಯತ್ನ ಪ್ರಯತ್ನ, ಕೆಲವರು ಹುಟ್ಟುವಾಗಲೇ ಬಡತನ ಹೊಂದಿದ್ದರೆ ಕೆಲವರು ಹುಟ್ಟಿದಾಗಲೇ ಐಶ್ವರ್ಯವನ್ನು ಹೊಂದಿರುತ್ತಾರೆ. ಐಶ್ವರ್ಯ ಇದ್ದರೂ ಇರದಿದ್ದರೂ ದುಡಿಮೆ ಅನ್ನೋದು ಪ್ರತಿಯೊಂದು ಮಾನವನ ಕರ್ತವ್ಯ. ದುಡ್ಡಿರುವ ಮನುಷ್ಯ ದುಡಿಯದಿದ್ದರೆ ಅವನ ಗೌರವವನ್ನು ಅವನೇ ಕಳೆದುಕೊಳ್ಳುತ್ತಾನೆ, ಬಡತನದಲ್ಲಿರುವ ಮನುಷ್ಯ ದುಡಿಯದಿದ್ದರೆ ತುತ್ತು ಅನ್ನಕ್ಕೆ ಪರದಾಡುವ ಸ್ಥಿತಿ ಜಾಸ್ತಿಯಾಗಿರುತ್ತದೆ.

 ಕೆಲವೊಂದು ವಿಷಯಗಳು ಸತತ ಪ್ರಯತ್ನ ಗುರಿಯೊಂದಿಗೆ ನಡೆದು  ಬಿಟ್ಟರೆ,  ಇನ್ನು ಕೆಲವು ವಿಷಯಗಳು ನಮಗರಿವಿಲ್ಲದಂತೆಯೇ ಬಂದುಬಿಡುತ್ತದೆ. ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನವನ್ನು ಮಾಡುತ್ತಿದ್ದರೆ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಯಶಸ್ಸು ಸಿಗದಿದ್ದರೂ ಜೀವನ ಮುಗಿಸುವಲ್ಲಿ ಸಶಕ್ತರಾಗುತ್ತೇವೆ. ಪರದೇಶ ಪಯಣ ದುಡಿಮೆಗಾಗಿ ಮಾಡಿದ್ದರೆ,  ಇಷ್ಟವಿದ್ದು ಇಷ್ಟವಿಲ್ಲದೆ ನಡೆದ ಪಯಣ ವಾಗಿರಬಹುದು. ಹೊರ ದೇಶವೆಂದರೆ ಅನ್ನಕೊಡುವ ದೇಶವಾದರೂ ಗಳಿಸುವ ಅನ್ನಕ್ಕಾಗಿ  ಪರಿತಪಿಸುವ ಪರಿ ಅದೆಷ್ಟು ಕಷ್ಟ ನೋವುಗಳನ್ನು ಹೊಂದಿರುತ್ತದೆ. ನೋಡುವವರ ಕಣ್ಣಿಗೆ ಹೊರ ದೇಶವೆಂದು ಅದ್ದೂರಿಯಾಗಿ ಕಂಡರು ಕಡಲಾಚೆಯ ದೇಶಕ್ಕೆ  ಲಗ್ಗೆ ಇಟ್ಟಾಗ ಮಾತ್ರ ನಮ್ಮ ನೆಲದ ಬೆಲೆ ತಿಳಿಯುವುದು. ಹಾಗಂತ ಪರದೇಶಕ್ಕೆ ವಲಸೆ ಹೋಗುವ ರೆಲ್ಲರೂ ಕಷ್ಟದಲ್ಲಿ ಜೀವನ ತೆಗೆಯುತ್ತಾರೆ ಎಂದಲ್ಲ. ಆದರೆ ವಿಜಯ ಜೀವನವನ್ನು ಕಳೆದು  ಕೊಳ್ಳುವವರಲ್ಲಿ ಹೊರದೇಶಕ್ಕೆ ಪ್ರಯಾಣ ಮಾಡುವವರು ಜಾಸ್ತಿ . ವಿದ್ಯೆ ಕಲಿತು ವಿದೇಶಕ್ಕೆ ಹೋದವರ ಸ್ಥಿತಿ ಒಂದು ವಿಧವಾದರೆ ಅವಿದ್ಯಾವಂತರು ವಿದೇಶಕ್ಕೆ ತೆರಳಿದರೆ ಇನ್ನೊಂದು ರೀತಿ. ಬದುಕಲು ಹಣದ ಅವಶ್ಯಕತೆ ಎಲ್ಲರಿಗೂ ಇದೆ ಆದರೆ ಪರದೇಶಿಯಾಗಿ ದುಡಿಯುವ ಹಣಕ್ಕೆ ವಿನಂಬ್ರ ಮನಸು ಆಸೆಗಳನ್ನು ದೂರ ಮಾಡಿ ತನ್ನವರಿಗಾಗಿ ದುಡಿಯುವ ಜನಗಳು ಜಾಸ್ತಿ. ವರಷಕ್ಕೊಮ್ಮೆ ಊರಿಗೆ ಪಯಣ ಮಾಡುವಾಗ  ಬಂಧು ಬಳಗದ ಮೇಲೆ ಆಸೆಯ ನಿತ್ತು ಉಳ್ಳ ಸಂಪಾದನೆಯಲ್ಲಿ ಒಂದಷ್ಟು ಸರಕು ಸರಂಜಾಮುಗಳನ್ನು ಒಯ್ಯುತ್ತಾನೆ. ನನಗಾಗಿ ನನ್ನ ತಂದೆ-ತಾಯಿ ತಮ್ಮ ಅಣ್ಣ-ತಂಗಿ ಕಾಯುತ್ತಿರುತ್ತಾರೆ ಅವರನ್ನು ಕಾಣಲು ಬಹಳ ಉತ್ಸಾಹದಿಂದ ಮುಗುಳ್ನಗುತ್ತಾ ತನ್ನ ಊರಿಗೆ ಪ್ರಯಾಣ ಬೆಳೆಸುತ್ತಾನೆ. ಆದರೆ ದುಡಿಮೆಯ ಸಮಯದಲ್ಲಿ ಪ್ರತಿಯೊಬ್ಬ ಪರದೇಶಿ ಪಡುವ ಕಷ್ಟ ಊಹಿಸಲು ಅಸಾಧ್ಯ. ತನ್ನ ಊರಲ್ಲಿ ಹತ್ತು ರೂಪಾಯಿ ಸಂಪಾದನೆ ಮಾಡುತ್ತಿದ್ದಾಗ ₹20 ರೂಪಾಯಿಯ ಆಸೆಯಿಂದ ಅಥವಾ ಆಸೆಯಿಲ್ಲದೆ ಯು ತನ್ನ ಸಂಸಾರದ ಜವಾಬ್ದಾರಿಯನ್ನು ಹೊತ್ತು ಪರದೇಶಿಯಾಗಿ ಜೀವನಪರ್ಯಂತ ಇದ್ದಿರಬಹುದು. ಕಾಲ ಕಳೆದಂತೆ ಹತ್ತಿರವಿದ್ದ ಸಂಬಂಧಗಳು ದೂರ ದೂರವಾಗುತ್ತಾ ಪರದೇಶಿಯ ಪ್ರಾಣಕ್ಕೆ ಮಾತ್ರ ಬೆಲೆ ಇಲ್ಲದಂತಾಗುತ್ತ ಬರುತ್ತಿದೆ. ಹೆಚ್ಚಾಗಿ ತನ್ನ ಸಂಸಾರಕ್ಕಾಗಿ ಹಗಲಿರುಳು ದುಡಿದು ಆದಷ್ಟು ಬೇಗ ನಾ ಊರಿಗೆ ಹೋಗಬೇಕೆಂಬ ಆಸೆಯಿಂದ ಕಳೆಯುತ್ತಿರುತ್ತಾನೆ. ಎಷ್ಟು ವರ್ಷ ದುಡಿದರು ಒಂದಷ್ಟು ಹಣವನ್ನು ಮಾಡಲು ತುಂಬಾ ಶ್ರಮ ಪಡುತ್ತಾನೆ.

 ಪರದೇಶಕ್ಕೆ ಹೋಗುವ ಪ್ರತಿಯೊಂದು ಜನರು ತನ್ನವರನ್ನು ಕಳೆದುಕೊಳ್ಳುತ್ತಾರೆ, ಹಬ್ಬಹರಿದಿನ, ಜಾತ್ರೆ ಜಂಗುಳಿ,  ವಿಹಾರ, ತಮ್ಮ ಊರಿನ ಪ್ರತಿಯೊಂದು ಸುಂದರ ಕ್ಷಣಗಳನ್ನು ಪಡೆಯುವಲ್ಲಿ ವಿಫಲರಾಗುತ್ತಾರೆ. ಅದೆಷ್ಟು ದುಃಖ ವೆಂದರೆ ಹೇಳತೀರದು, ನಾಳೆ ನಮ್ಮ ಊರಿನಲ್ಲಿ ಜಾತ್ರೆ ಹಬ್ಬಗಳೆಂದಾದರೆ, ಇಂದು ನಮಗೆ ಜಾತ್ರೆಯ ದೃಶ್ಯಗಳು ಕಣ್ಣುಮುಂದೆ ಹಾಯುತಿರುತ್ತದೆ. ಮನಸುಗಳು ಅಲ್ಲೋಲ ಕಲ್ಲೋಲವಾಗುತ್ತದೆ, ಕಣ್ಣಲ್ಲಿ ನೀರು ತಂದುಬಿಡುತ್ತದೆ, ನಾನೊಬ್ಬ ಪರದೇಶಿ ನನ್ನ ಭಾಗ್ಯ ತೆಂದು ತನ್ನ ಕಣ್ಣನಿರನು ತಾನೇ ಉಜ್ಜಿ ಕೊಳ್ಳುತ್ತಾನೆ.  ಮನೆಯ ಸಂಭ್ರಮ, ಮಕ್ಕಳ ಗಲಾಟೆ, ತಂದೆ-ತಾಯಿಯ ನಗು, ತಂಗಿಯರ ಪ್ರೀತಿ, ತುಂಟಾಟ, ಗೆಳೆಯ-ಗೆಳತಿಯರ ಪ್ರೀತಿ ವಾತ್ಸಲ್ಯ ಎಲ್ಲವನ್ನು ನೆನೆದು ನೆನೆದು ಕೊರಗುತ್ತಿರುತ್ತಾರೆ. ಆದರೆ ಪರದೇಶಿ ಪರದೇಶಿಯಾಗಿ ಪರಿತಪಿಸುತ್ತಾ ಜೀವನ ಸಾಗಿಸುತ್ತಾನೆ.

 ಜೀವನವನ್ನು ಸುಂದರವಾಗಿಸುವ ಕನಸು ಕಾಣುತ್ತಾ  ಪರದೇಶಿ ಯಾಗಿ ಉಳಿದ ಅದೆಷ್ಟೋ ಜನರು ಒಂದು ದೃಷ್ಟಿಯಲ್ಲಿ ಭಾರತದ ಆರ್ಥಿಕತೆಯ ಬೆನ್ನೆಲುಬು ಹೇಳಿದರೂ ತಪ್ಪಾಗಲಾರದು, ತನ್ನವರಿಗಾಗಿ ಕೆಲಸವನ್ನು ಮಾಡುತ್ತ ದೇಶದ ಅಭಿವೃದ್ಧಿಗೆ ಕಿರುಕಾಣಿಕೆ ನೀಡುವ ಸಮಾಧಾನ ಪರದೇಶಿಯರಿಗಿದೆ, ನಮ್ಮ ದೇಶದ ಪರಂಪರೆ, ಸಂಸ್ಕೃತಿ,ಆಚಾರ ವಿಚಾರ, ಮಾನವೀಯತೆ, ವಿಧೇಯತೆಯನ್ನು ಕಾಪಾಡಿಕೊಂಡು ಭಾರತಾಂಬೆಯ ಹೆಸರನ್ನು ಪ್ರಪಂಚಕ್ಕೆ ತಿಳಿಸುವ ಜವಾಬ್ದಾರಿ ಭಾರತೀಯ ಪ್ರಜೆಗಳು ನಡೆಸಿದಲ್ಲಿ ಭಾರತದ ಭವಿಷ್ಯ ಉಜ್ವಲವಾಗಬಹುದು. ನಮ್ಮ ದೇಶದ ಪರದೇಶಿಯರೆಲ್ಲರೂ ವಿದೇಶದಲ್ಲಿ ಭಾರತೀಯರ ಗೌರವವನ್ನು ಹೆಚ್ಚಿಸಲಿ ಭಾರತೀಯರೆಂದರೇನು ಅನ್ನೋದನ್ನು ಪ್ರಪಂಚಕ್ಕೆ ತಿಳಿಸಲಿ, ಪ್ರಜ್ಞಾವಂತ ಭಾರತೀಯ ಹುಟ್ಟುತ್ತಿರಲಿ.

                        ✍️ಮಾಧವ ನಾಯ್ಕ್ ಅಂಜಾರು🙏  

                                (ಕನ್ನಡಿಗ -ಕುವೈಟ್ )


 






Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ