ಬಯಕೆ (ಕವನ -50)
ಪ್ರೀತಿ ಬಯಸುವವನು
ನಯವಿನಯತೆ ತೋರುತ್ತಾನೆ
ನಗು ಬಯಸುವವನು
ನಗುಮುಖ ತೋರಿಸುತ್ತಾನೆ
ದ್ವೇಷ ಹೆಚ್ಚಾಗಿರುವವನು
ದ್ವೇಷದ ಜೀವನ ಸಾಗಿಸುತ್ತಾನೆ
ಅಸೂಯೆತುಂಬಿರೋನು
ಊರೆಲ್ಲ ಅಸೂಯೆ ತುಂಬುತ್ತಾನೆ
ಮಾತು ತಿಳಿದವನು
ಸಿಹಿ ಮಾತನ್ನಾಡುತ್ತಾನೆ
ಏನನ್ನೂ ಬಯಸದವನು
ಮನಬಂದಂತೆ ಇರುತ್ತಾನೆ
✍️ಮಾಧವ ಅಂಜಾರು 🌷
Comments
Post a Comment