ಚಿಂತೆ ಚಿಂತೆ (ಕವನ -65)
ಮದುವೆಯಾದವರು
ಯಾಕಪ್ಪ ಮದುವೆಯಾದೆ
ಅಂತ ಗುಣುಗಬೇಡಿ
ಮದುವೆಯಾಗದವರು
ಮದುವೆಯಾಗಲಿಲ್ಲ
ಎಂದು ಚಿಂತಿಸಬೇಡಿ!
ಯಾಕಪ್ಪ ಮದುವೆಯಾದೆ
ಅಂತ ಗುಣುಗಬೇಡಿ
ಮದುವೆಯಾಗದವರು
ಮದುವೆಯಾಗಲಿಲ್ಲ
ಎಂದು ಚಿಂತಿಸಬೇಡಿ!
ಮಕ್ಕಳಾಗದವರು ಮಕ್ಕಲಿಲ್ಲ
ಎಂಬ ಚಿಂತೆಯಲಿ ಮುಳುಗಬೇಡಿ
ಮಕ್ಕಳಿದ್ದವರು ಹೆಣ್ಣು ಗಂಡೆಂದು
ಆಯ್ಕೆಗೆ ತೊಡಗಬೇಡಿ
ಕೈಹಿಡಿದವರು ಬಿಟ್ಟುಬಿಟ್ಟರೆಂದು
ದಿನಾ ಮರುಗಬೇಡಿ!
ನಿಮ್ಮ ಒಳ್ಳೆತನವ
ಮತ್ತವರಿಗೆ ಮಾರಿಬಿಡಬೇಡಿ
ಸತ್ಯವಂತನಾಗಿ ಬದುಕಲು
ಹಿಂಜರಿಯಬೇಡಿ
ನಮ್ಮನ್ನು ಕಾಯುವವನೊಬ್ಬ
ಇದ್ದಾನೆ ಮರೆಯಬೇಡಿ!
✍️ಮಾಧವ ಅಂಜಾರು 🙏
Comments
Post a Comment