ವಿದ್ಯಾವಂತ (ಕವನ -92)
ವಿದ್ಯಾವಂತ 
********
ಓದುಬರಹ ಕಲಿತು 
ಅವಿದ್ಯಾವಂತನಿಗೆ 
ಮೋಸಮಾಡುವವಗೆ 
ವಿದ್ಯಾವಂತನೆಂದು 
ಹೇಳಲಾಗದು !
ಅವಿದ್ಯಾವಂತನೆದುರಿಗೆ 
ಉದ್ದುದ್ದ ಬರೆದು 
ಹೇಳಿಕೊಳ್ಳುವವಗೆ 
ವಿದ್ಯಾವಂತನೆಂದು 
ಹೇಳಲಾಗದು !
ದೊಡ್ಡ ಭಾಷಣ 
ವೇಷಭೂಷಣ ಮಾಡುತ 
ಅಮಾಯಕರ ತುಳಿಯುವವ
ವಿದ್ಯಾವಂತನೆಂದು 
ಹೇಳಿಕೊಳ್ಳಬಾರದು !
ವಿದ್ಯೆ ಎಂದರೆ 
ಜೀವನದ ಪ್ರತಿಯೊಂದು 
ಸಮಯ ಸಂದರ್ಭದಲ್ಲಿ 
ವಿವೇಕತೆ, ವಿಧೇಯತೆ 
ತೋರ್ಪಡಿಸುವವರೆಂದು 
ಮರೆಯಬಾರದು !
✍️ಮಾಧವ ನಾಯ್ಕ್ ಅಂಜಾರು 🌹
 
 
 
Comments
Post a Comment