ಸುಳ್ಳುಗಾರ (ಕವನ -47)
ನಾನು ಸತ್ಯವನ್ನೇ ಹೇಳುತ್ತೇನೆ
ಎಂದು ಹೇಳುತಿದ್ದ ಕಳ್ಳ
ತನ್ನ ಸಂಗಡಿಗರೆಲ್ಲರೂ
ಸತ್ಯವಂತರೆಂದು ಸುಳ್ಳುಬಿಟ್ಟ,
ನಾನು ದೇವರಂತೆ
ಎಂದು ಹೇಳುತಿದ್ದ ಸುಳ್ಳ
ದೇವರೇ ಇಲ್ಲವೆಂದು
ರಾಕ್ಷಸರಂತೆ ನಡೆದುಬಿಟ್ಟ
ನಾನು ನಿಮ್ಮವನೆಂದು
ಹೇಳುತಿದ್ದ ಸುಳ್ಳುಗಾರ
ಪ್ರಪಂಚವೇ ಸುಳ್ಳೆಂದು
ವಾದಿಸಿ ಮಣ್ಣಾಗಿಬಿಟ್ಟ
✍️ಮಾಧವ ಅಂಜಾರು 🌷
Comments
Post a Comment