ಅಂತರಾಳದ ಭಕ್ತಿ
— ದುರ್ಗಾದೇವಿಗೆ ಸಮರ್ಪಣೆ ತಿಳಿಯದು ನನಗೆ ಆಡಂಬರದ ಭಕ್ತಿ, ದುರ್ಗೆ, ನವರಾತ್ರಿಯ ಸೇವೆ ನಿನಗೆ ಅರ್ಪಿಸುವೆ ಅಂತರಾಳದ ಭಕ್ತಿ. ಬೇಡ ನನಗೆ ಅಷ್ಟೈಶ್ವರ್ಯದ ಬೀಡು, ನಿನ್ನ ಸೇವೆಗೆ ಮೀಸಲಿರಲಿ ನನ್ನ ಜೀವನವಿಡೀ, ನಿಜಭಕ್ತಿಯ ನುಡಿ. ಜಗವೆಲ್ಲ ನೀನೇ ಇರುವಾಗ ಇನ್ಯಾರ ಭಯವೇಕೆ? ನಿನ್ನ ಪಾದದ ಧೂಳಾಗಿ ನಾನಿದ್ದರೆ ಸಾಕು, ಶಕ್ತಿಯೇ, ನಿನ್ನ ಕೃಪೆಯೊಂದೇ ನನ್ನ ಬದುಕಿಗೆ ಬೆಳಕೇ. - ಮಾಧವ ಕೆ ಅಂಜಾರು