(ಲೇಖನ -28)ಭರವಸೆಯ ಬದುಕು

 ಭರವಸೆಯೇ  ಬದುಕು 

 ಈ ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನು ತನಗಾಗಿ ತನ್ನವರಿಗಾಗಿ ಬದುಕನ್ನು ಸಾಗಿಸುತ್ತಾ ಜೀವನದ ಪ್ರತಿಯೊಂದು ಏರಿಳಿತಗಳನ್ನು ಅನುಭವಿಸುತ್ತಾ ತನ್ನ ಜೀವನಕ್ಕೆ ವಿದಾಯ ಹೇಳುತ್ತಾನೆ. ಆದರೆ ಬದುಕಿನ ದಾರಿಯಲ್ಲಿ ನಡೆಯುವ ಪ್ರತಿಯೊಂದು ಸಿಹಿ ಕಹಿ ನೆನಪುಗಳು ಮಾತ್ರ ಜೀವನದ ಪಾಠವಾಗಿ ಉಳಿಯುತ್ತದೆ.


 ಹೌದು, ಇನ್ನೊಬ್ಬರಿಗಾಗಿ ಬದುಕುವರು ಬಹಳ ವಿರಳ, ಇನ್ನೊಬ್ಬರಿಗಾಗಿ ಬದುಕಿದವನು ನೋವನ್ನು ಅನುಭವಿಸುವುದು ತುಂಬಾ ಜಾಸ್ತಿನೇ. ಸಂಸಾರದ ಸಾಗರದಲ್ಲಿ ಬಾಂಧವ್ಯಗಳನ್ನು ಉಳಿಸಿಕೊಳ್ಳಲು ಹೆಣಗಾಡುವವನು ತನ್ನ ಆಸೆಗಳನ್ನು ಬದಿಗಿಟ್ಟು ಎಲ್ಲರ ಒಳಿತಿಗಾಗಿ ಶ್ರಮಿಸುವನು. ಆದರೆ ಕೆಲವೊಂದು ಸಂದರ್ಭಗಳಲ್ಲಿ ನಾವಂದುಕೊಂಡಂತೆ ಯಾವುದೂ ನಡೆಯುವುದಿಲ್ಲ ನಂಬಿಕಸ್ತ ರೇ ನಮ್ಮನ್ನು ಮೋಸ ಮಾಡುವ ಸಂದರ್ಭಗಳು ನಡೆದುಹೋಗುತ್ತವೆ. ಅತಿ ಹತ್ತಿರದವರೇ ಅಂದರೆ ಮಕ್ಕಳು ಹೆಂಡತಿ, ತಮ್ಮ ಅಣ್ಣ, ಅಕ್ಕ ತಂಗಿ ಎಲ್ಲರೂ ಒಂದೇ ತಾಯಿಯ ಮಡಿಲಲ್ಲಿ ಬೆಳೆದಿದ್ದರೂ ಭಾವನೆಗಳ ಕೊರತೆಯಿಂದ ಅಲ್ಲೋಲಕಲ್ಲೋಲ ವಾಗಿ ಅತಿ ಆಸೆಗೆ ಬಿದ್ದು ಅವನತಿ ಹೊಂದುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಾನವೀಯತೆಯ ಕೊರತೆಗಳು ಹೆಚ್ಚಾಗುತ್ತಿರುವುದರಿಂದ ಬಾಂಧವ್ಯಗಳು ಕೂಡ ಕಡಿಮೆಯಾಗುತ್ತಿದೆ. ಪರಿಸ್ಥಿತಿ ಎಲ್ಲಿಂದ ಎಲ್ಲಿವರೆಗೆ ಅಂದರೆ ತನ್ನ ಗೆಳೆಯನಿಗೆ ಕಷ್ಟಕಾಲದಲ್ಲಿ ದುಡ್ಡಿನ ಅವಶ್ಯಕತೆ ಇದ್ದಾಗ ನಿಜವಾದ ಗೆಳೆಯನೊಬ್ಬ ಹಿಂದೆ ಮುಂದೆ ನೋಡದೆ ತನ್ನಲ್ಲಿರುವ ಸಹಾಯವನ್ನು ಮನಃಪೂರ್ವಕ ಮಾಡಿ ಅದೇ ಗೆಳೆಯನೊಂದಿಗೆ ಸ್ವತಹ ತೊಂದರೆಗೆ ಒಳಪಟ್ಟಾಗ ಸಹಾಯವನ್ನು ಕೇಳಿದರೆ ಕಿವಿಗೊಡದೆ ಸರಿದು ನಿಲ್ಲುವ ವ್ಯಕ್ತಿತ್ವ ಹೊಂದಿರುವವರು,  ಜವಾಬ್ದಾರಿಯುತ ಅಣ್ಣನೊಬ್ಬ ತನ್ನ ತಮ್ಮನ, ತಂಗಿಯ ಪ್ರತಿಯೊಂದು ಆಸೆಗಳಿಗೆ ನೆರವಾಗಿ ಕೊನೆಗೆ ನೆರವಾದ ಅಣ್ಣನನ್ನೇ ಮರೆತುಬಿಡುವ ನಿದರ್ಶನಗಳು, ಜೀವನದುದ್ದಕ್ಕೂ ತನ್ನ ಸಂಸಾರದ ಒಳಿತಿಗಾಗಿ ಜವಾಬ್ದಾರಿಯುತ ಅಪ್ಪನೊಬ್ಬ ತನ್ನ ಮಕ್ಕಳಿಂದ ದೂರವಾಗುವ ಸ್ಥಿತಿ, ಐಶ್ವರ್ಯ ವಿರುವಾಗ ತನ್ನ ಗಂಡನನ್ನು ಸರ್ವಸ್ವ ಎಂದು ಹೇಳುತ್ತಿದ್ದಳು ಐಶ್ವರ್ಯ ಕಳೆದುಕೊಂಡಾಗ ಗಂಡನನ್ನು ತೆಗಳಿ ಬಾಳುವ ಅವಿವೇಕಿ ಹೆಂಡತಿ. ಬೇಜವಾಬ್ದಾರಿ ಗಂಡನೊಬ್ಬ ತನ್ನ ಹೆಂಡತಿ ಮಕ್ಕಳಿಗೆ ಅನ್ನ ಹಾಕದೆ ಸೂಟು-ಬೂಟು ಹಾಕಿ ಊರಲ್ಲ ಸುತ್ತಾಡುವ ಅವಿವೇಕಿ ಗಂಡಸು. ತನ್ನ ಆಸೆಗಳು ನೆರವೇರಲಿಲ್ಲ ಎಂದು ಮತ್ತೊಬ್ಬರ ಕತ್ತುಹಿಸುಕಿ ಬದುಕುವ ಜನರು ಇಂದಿನ ಕಾಲದಲ್ಲಿ ಜಾಸ್ತಿಯಾಗುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಆಡಂಬರದ ಬದುಕಿಗೆ ಬಲಿಯಾಗುತ್ತಿರುವ ಇಂದಿನ ಪೀಳಿಗೆಗಳು ಮತ್ತು ಸುಲಭವಾಗಿ ಸಿಗುತ್ತಿರುವ ಸೌಲಭ್ಯಗಳು. 


 ಒಮ್ಮೊಮ್ಮೆ ಮತ್ತೊಬ್ಬರಿಗಾಗಿ ಬದುಕುವುದು ತಪ್ಪು ಎಂದು ಅನಿಸಿದರೂ ಅದರಲ್ಲಿ ಸಿಗುವ ಸುಖ ಸಂತೋಷವನ್ನು ತಂದುಕೊಡುತ್ತದೆ ಇನ್ನಷ್ಟು ಸಹಾಯ ಸಹಕಾರಗಳನ್ನು ಮಾಡುವ ಮನಸುಗಳು ಜಾಸ್ತಿಯಾಗುತ್ತದೆ. ನಿಮಗೆ ನಿಮ್ಮವರೇ ದ್ರೋಹ ಮಾಡಿದ್ದರೆ ಅವರ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಬೇಡಿ ನೀವು ನೀವಾಗಿ ಇದ್ದು  ಒಳ್ಳೆತನವನ್ನು ಇನ್ನಷ್ಟು ಇಮ್ಮಡಿಗೊಳಿಸಿ ಸದೃಢವಾಗಿ ಜೀವನ ಸಾಗಿಸಲು ಕಲಿಯಬೇಕು. ಇಂದು ತೆಗಳಿದವರು ನಾಳೆ ಹೊಗಳಬಹುದು ಇಂದು ಹೊಗಳಿದವರು ನಾಳೆ ತೆಗಳಲುಬಹುದು.  ತನ್ನ ಆತ್ಮ ಕ್ಕೆ ದ್ರೋಹ ಮಾಡದೆ ಬದುಕಿದಾಗ ನಿಮ್ಮೊಂದಿಗೆ ಯಾರು ಇರದಿದ್ದರೂ ನಿಮ್ಮ ಆತ್ಮವಿಶ್ವಾಸ ಜೀವಂತವಾಗಿರುತ್ತದೆ ನಿಮ್ಮ ಬಗ್ಗೆ ನಿಮಗೆ ಗೌರವ ಹೆಚ್ಚುತ್ತದೆ.


 ಸತ್ತಮತ್ತ ನಡೆಯುವ ಕೆಟ್ಟ ನಿದರ್ಶನಗಳಿಗೆ ಕಿವಿಕೊಡದೆ ಸಂತೋಷದ ಕ್ಷಣಗಳನ್ನು ನೆನೆಯುತ್ತ ತನ್ನ ಮೇಲೆ ಭರವಸೆಯನ್ನು ಇಟ್ಟುಕೊಂಡು ಜೀವನ ಸಾಗಿಸಿದರೆ ಯಾರೇನು ನಿಮಗೆ ಹೇಳಿದರು,  ತೆಗಳಿದರು, ಹೊಗಳಿದರು ಸೌಮ್ಯ ರೀತಿಯಲ್ಲಿ ವರ್ತಿಸುವ ಒಳ್ಳೆ ಗುಣವನ್ನು ಗಳಿಸುವಿರಿ.


 ನಾನು ಹೇಗೆಂದು ನನಗೆ ಮಾತ್ರ ತಿಳಿದಿದ್ದರೆ ಸಾಕು, ಇನ್ನೊಬ್ಬರಿಗೆ ಕೆಡುಕು ಮಾಡುವ ಪ್ರವೃತ್ತಿ  ಇರದಿದ್ದರೆ  ಸಾಕು. ಭರವಸೆಯ ಬದುಕು ನಮಗಂತೂ ಬೇಕು ಮುಂದಿನ ದಿನಗಳಲ್ಲಿ ಮಾನವ ಮೌಲ್ಯ ಉಳಿದರೆ ಸಾಕು.



Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ