ದೇವ ನೀನೊಬ್ಬನೇ (ಕವನ -93)
ದೇವ ನೀನೊಬ್ಬನೇ
*************
ನಿನ್ನ ಅವಮಾನಿಸುವವರು
ಎನ್ನ ಅವಮಾನಿಸುವರು
ಕಣ್ಣಮುಂದೆ ನಟಿಸುವವರು
ಬೆನ್ನಹಿಂದೆ ಹಾರಾಡುವರು
ಉರಿಯುತ್ತಿದ್ದ ದೀಪಕೆ
ತಣ್ಣನೆಯ ನೀರೆರಚಿ
ಮತ್ತೆ ಉರಿಸುವ ಪ್ರಯತ್ನ
ಮಾಡುವ ಮನುಜರು
ನೀನಿದ್ದರೆ ಹೃದಯ ಬಡಿಯಲಿ
ನಾನಿದ್ದರೆ ದಿನವು ನಿನ್ನ ಬಳಿ
ಹೇಳದೆ, ಬೇರೆ ದಾರಿಯಿಲ್ಲ
ದೇವ ನೀನೊಬ್ಬನೇ ಎನ್ನ ಬಳಿ
✍️ಮಾಧವ ಅಂಜಾರು 😭
Comments
Post a Comment