ಬಾಂಧವ್ಯ (ಕವನ -78)
ಬಾಂಧವ್ಯ
*********
ಕಳೆದು ಹೋದ ವಸ್ತು
ಮತ್ತೆ ಸಿಕ್ಕಾಗ
ಅದೆಷ್ಟು ಸಂತೋಷ
ಕಳೆದು ಹೋದ ಜೀವ
ಬರದೇ ಹೋದಾಗ
ಅದೆಷ್ಟು ದುಃಖ,
ಕಳೆದು ಹೋದ ಬಾಂಧವ್ಯ
ಮತ್ತೆ ಪುಟಿದಾಗ
ಅದೆಷ್ಟು ಸಂತೋಷ
ಕಳೆದು ಹೋದ ವಿಶ್ವಾಸ
ಮತ್ತೆ ಹುಟ್ಟುವಾಗ
ಅದೆಷ್ಟು ಸಂಕೋಚ,
ವಸ್ತು ಕಳೆದುಹೋಗುವ ಮುನ್ನ
ಪ್ರೀತಿಯಿಂದ ಇಟ್ಟುಕೊಳ್ಳಿ
ಮತ್ತೆ ಸಿಗಬಹುದು
ಜೀವ ಕಳೆದುಹೋಗುವ ಮುನ್ನ
ಪ್ರೀತಿಯಿಂದ ಬಾಳಿ
ಮತ್ತೆ ಸಿಗಲಾರದು!
✍️ಮಾಧವ ಅಂಜಾರು 🙏
Comments
Post a Comment