ಭಯವಿಲ್ಲ (ಕವನ -51)

ನಾನು ಮರೆಯಾದಾಗ
ಯಾರು  ಅಳುತ್ತಾರೆ ಅನ್ನೋದು
ಎನಗೆ ತಿಳಿಯುವುದಿಲ್ಲ 
ನಾನು ಬದುಕಿದ್ದಾಗ
ಜೊತೆಯಲ್ಲಿ ಇರುವವರನ್ನು 
ನಾ ಮರೆಯೋದಿಲ್ಲ

ನಗುವಾಗ ಎನ್ನ ಜೊತೆ
ಸೇರುವವರ ಬಗ್ಗೆ ಚಿಂತೆಯಿಲ್ಲ
ನೊಂದಾಗ ಜೊತೆಯಿಲ್ಲದವರ
ಕುರಿತು ಬೇಸರವೂ ಇಲ್ಲ
ಏಕಾಂಗಿಯಾಗಿ  ಬಂದಮೇಲೆ
ಒಬ್ಬನೇ ಹೋಗಲು ಭಯವಿಲ್ಲ
        ✍️ಮಾಧವ ಅಂಜಾರು 🌷





Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ