ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ ಆರಂಭಕ್ಕೆ ಕಾರಣಕರ್ತರಾಗಿರುವ , ಬಾವಿಕಟ್ಟೆ ಪದ್ಮನಾಭ ನಾಯ್ಕ ಮತ್ತು ಅಂಜಾರು ಮಠದ ದಿ ll ಲಕ್ಷೀ ನಾರಾಯಣ ಭಟ್. ಇಂದಿನ ಪೀಳಿಗೆಗೆ ತಿಳಿಯದೇ ಇರುವ ವಿಷಯ ಮತ್ತು ಸವಿ ನೆನಪುಗಳ ಪುಟಗಳು. ಸುಮಾರು 45 ವರುಷದ ಹಿಂದೆ ಆರಂಭಗೊಂಡ ಭಜನಾ ಮಂಡಳಿಯ ಮುಖ್ಯ ಕಾರಣಕರ್ತ ಅಂಜಾರು ಬಾವಿಕಟ್ಟೆ ಶ್ರೀ ಪದ್ಮನಾಭ ನಾಯ್ಕ ಯಾನೆ ನಂಗಣ್ಣ, ತಮ್ಮ ಯವ್ವನದ ದಿನಗಳಲ್ಲಿ ಬಹಳಷ್ಟು ಕನಸುಗಳನ್ನು ಕಂಡಿರುವ ಮತ್ತು ಸ್ವ ಉದ್ಯೋಗ ಮಾಡುತ್ತಲೆ ಬಿಡುವಿನ ಸಮಯದಲ್ಲಿ ಶ್ರೀಯುತ ಲಕ್ಷೀ ನಾರಾಯಣ ಭಟ್ ಇವರೊಂದಿಗೆ ಬಹಳಷ್ಟು ಬಾಂಧವ್ಯದಿಂದ ಕೂಡಿ ಬೆಳೆದಿರುವ ಶ್ರೀ ಪದ್ಮನಾಭ ನಾಯ್ಕ ಎಳೆಯ ವಯಸ್ಸಿನಲ್ಲಿ ಹಾಲಿನ ಡೈರಿಯನ್ನು ಮನೆಯಲ್ಲಿಯೇ ಆರಂಭಿಸಿ ಮಣಿಪಾಲದ ವರೆಗೂ ಸೈಕಲನ್ನು ತುಳಿದುಕೊಂಡು ಹೋಗಿ ಬರುತಿದ್ದ ಆ ಕಾಲ. ಬಹಳಷ್ಟು ಕಾಡು ದಾರಿ ಸರಿಯಾದ ರಸ್ತೆ ಸಂಪರ್ಕ ಗಳು ಇಲ್ಲದೇ ಇದ್ದರೂ ಸುಮಾರು 7 -8 ಹಾಲಿನ ಕ್ಯಾನ್ ತುಂಬಿಸ್ಕೊಂಡು ಮಣಿಪಾಲಕ್ಕೆ ಹಾಲು ಸರಬರಾಜು ಮಾಡುತ್ತಾ ಎಲ್ಲರ ಪ್ರೀತಿ ಪಾತ್ರರಾಗಿದ್ದರು ಮತ್ತು ಬಹಳಷ್ಟು ಹೆಸರುವಾಸಿಯಾಗಿದ್ದರು . ಪದ್ಮನಾಭ ಎಂದರೆ ಎಲ್ಲರಿಗೂ ಪರಿಚಯಸ್ತರಾಗಿ ಹಾಲು ಕೊಟ್ಟು ಹಿಂತಿರುಗಿ ಬರುವಾಗ ಭಟ್ಟರು ಮತ್ತು ಪದ್ಮನಾಭ ಇವರ ಸಂಭಾಷಣೆಯಲ್ಲಿ, ಆಗಲೇ ಪದ್ಮನಾಭರು ಯಕ್ಷಗಾನ ಹಾಡುಗಾರಿಕೆ, ಭಜನಾ ಹಾಡುಗಳನ್ನು ಹಾಡುತ್ತ ತನ್ನನ್ನು ತಾನೇ ಮರೆಯುತ್ತಿದ್ದರು. ಭಜನಾ ಹಾಡಿನಲ್ಲಿ ಬಹಳಷ್...
( ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ, ಜಿಲ್ಲಾವಾರು ಅಥವಾ ಪ್ರಾಂತ್ಯಕ್ಕ್ಕೆ ಅನುಸಾರವಾಗಿ ಮಾಡುವ ಯಾವುದೇ ಕಾರ್ಯಕ್ರಮಗಳ ಹಿಂದೆ ಕಾಣದ ಕೈಗಳ ಹಗಲಿರುಳಿನ ಪರಿಶ್ರಮ ಇದ್ದೆ ಇರುತ್ತದೆ. ಅದರಲ್ಲೂ ನಿರ್ದಿಷ್ಟ ಪಂಗಡದ ಅಥವಾ ಜಾತಿ ಮತ್ತು ಧರ್ಮದ ಬಗ್ಗೆ ನಡೆಯುವ ಸಮಾವೇಶಗಳಲ್ಲಿ ಅದೆಷ್ಟು ಜಾಗರೂಕರಾಗಿದ್ದರೂ ಅಲ್ಲೊಂದು ಇಲ್ಲೊಂದು ತಿಳಿದು, ತಿಳಿಯದ ತಪ್ಪುಗಳು ಆಗುವುದು ಸಹಜವಾಗಿ ನಡೆಯುತ್ತದೆ. ತಿಳಿದು ನಡೆಯುವ ಮತ್ತು ಪೂರ್ವ ಯೋಜಿತ ತಪ್ಪುಗಳು ಕೂಡ ನಡೆಯಲು ಸಾಧ್ಯತೆ ಕೂಡ ಅಲ್ಲಗಳೆಯುವಂತೆ ಇಲ್ಲ. ಸಾಮಾನ್ಯವಾಗಿ ದೊಡ್ಡ ಸಮಾವೇಶದ ಪೂರ್ವ ತಯಾರಿ ಸರಿ ಸುಮಾರು 7 ರಿಂದ 8 ತಿಂಗಳು ಎಲ್ಲಾ ಸದಸ್ಯರು ತಮ್ಮ ಪರಿಶ್ರಮವನ್ನು ಹಾಕಿಕೊಳ್ಳುತ್ತಾ ಬರುತ್ತಾರೆ. ಸಮಾವೇಶ ಸಮೀಪಗೊಳ್ಳುತ ಆಯೋಜಕರ ಎದೆ ಬಡಿತ ಜಾಸ್ತಿ ಯಾಗುತ್ತ ಕಡಿಮೆಯಾಗುತ್ತಲು ಇರುತ್ತದೆ. ವೇದಿಕೆ, ಆಸನ, ದೀಪಾಲಂಕಾರ, ವಾಹನ ವ್ಯವಸ್ಥೆ, ಆಮಂತ್ರಣ ಪತ್ರಿಕೆ, ಊಟ ಉಪಚಾರ ವ್ಯವಸ್ಥೆ, ವಾಹನ ನಿಲುಗಡೆಯ ವ್ಯವಸ್ಥೆ, ಮುಖ್ಯ ಅಥಿತಿ ಮತ್ತು ಸಮಾರಂಭದ ಪ್ರತೀ ಆಹ್ವಾನಿತ ವ್ಯಕ್ತಗಳನ್ನು ಗೌರವಿಸುವ ಮತ್ತು ಅವರನ್ನು ಕ್ಷೇಮವಾಗಿ ನೋಡಿಕೊಳ್ಳುವ ಜವಾಬ್ದಾರಿ ಹಾಗೆಯೇ ಸಾಂಸ್ಕೃತಿಕ ಕಾರ್ಯಕ್ರಮ ದ ಎಲ್ಲಾ ತಯಾರಿ ಇಂತಹ ಅನೇಕ ಜವಾಬ್ದಾರಿಗಳು ಸದಸ್ಯರು ಮಾಡುತ್ತಲೆ ಇರುತ್ತಾರೆ. ಸಮಾಜಕ್ಕೆ ಒಳಿತನ...
ಭಾರತೀಯ ರಾಯಭಾರಿ ಕುವೈಟ್ ನಲ್ಲಿ, ಹುಲಿಕುಣಿತ ತುಳು ಸಂಸ್ಕೃತಿಯ ಭಾಗವಾಗಿರುವ ಹುಲಿಕುಣಿತ ವಿದೇಶದಲ್ಲಿ ರಾರಾಜಿಸುತ್ತ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ, ತುಳುವರು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ತಮ್ಮ ಸಂಪ್ರದಾಯವನ್ನು ಬಿಟ್ಟು ಕೊಡುವುದಿಲ್ಲ, ನಮಸ್ಕಾರ ಊರುಡು ಒಲ್ಪ ದಿಂದ ಆರಂಭ ಆಗುವ ಸಂಭಾಷಣೆ, ಹುಲಿ ಕುಣಿತದಂತಹ ಅನೇಕ ಸಂಪ್ರದಾಯವನ್ನು ಬಹಳಷ್ಟು ಶೃದ್ದೆಯಿಂದ ಮತ್ತು ಶಿಸ್ತಿನಿಂದ ಮಾಡಿ ತುಳುವರ ಸಂಸ್ಕೃತಿಗೆ ಇನ್ನಷ್ಟು ಮೆರುಗು ಕೊಡುವ ತುಳು ಬಿಲ್ಲವ ಸಂಘದ ಸದಸ್ಯರ ತಂಡ ಅನೇಕ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಡಿರುತ್ತಾರೆ, ಒಟ್ಟಾರೆ ಹೆಚ್ಚಿನ ಕಲಾವಿದರು ಕುವೈಟ್ನಲ್ಲಿ ವಾಸವಾಗಿದ್ದಾರೆ ಹೇಳಬಹುದು. ನೃತ್ಯ, ನಾಟಕ, ಪ್ರಹಸನ, ಹುಲಿವೇಷ, ಕರ್ನಾಟ/ ಭಾರತದ ಅನೇಕ ಇತಿಹಾಸದ ಸನ್ನಿವೇಶವನ್ನು ವೇದಿಕೆಯಲ್ಲಿ ನೋಡುವ ಅವಕಾಶವನ್ನು ಅನೇಕ ಸಂಘ ಸಂಸ್ಥೆಗಳು ನಿರಂತರ ಮಾಡುತ್ತಿರುವುದು ನಮಗೆಲ್ಲರಿಗೂ ಸಂತೋಷವನ್ನೂ ತಂದು ಕೊಡುತ್ತಲಿದೆ. ನಾವು ಚಿಕ್ಕವರಿದ್ದಾಗ ನಡೆಯುತ್ತಿದ ಹುಲಿ ಕುಣಿತಕ್ಕೊ, ಇಂದಿನ ದಿನದಲ್ಲಿ ನಡೆಯುವ ಕುಣಿತಕ್ಕೂ ಬಹಳಷ್ಟು ಬದಲಾವಣೆ ಕಂಡಿರುತ್ತೇನೆ. ವೇಷಭೂಷಣೆ ಅತ್ಯಂತ ಸುಂದರ, ಹಾಕುವ ಹೆಜ್ಜೆ, ಎಲ್ಲವೂ ಬಹಳಷ್ಟು ಚೆನ್ನಾಗಿ ಮೂಡಿ ಬರುತ್ತದೆ. ಎಲ್ಲಾ ಕಲಾವಿದರಿಗೂ ಇನ್ನಷ್ಟು ಹೆಚ್ಚಿನ ಯಶಸ್ಸು ಮತ್ತು ಆಶೀರ್ವಾದ ಸ...
Comments
Post a Comment