ನನ್ನ ಪ್ರಪಂಚ ನೀನು (ಕವನ -44)

ನಿನ್ನ ಕಣ್ಣ ನೋಟಕೆ
ಹೃದಯ ಬಡಿತ ಏರಿಕೆ
ಸಣ್ಣ ಹೆಜ್ಜೆಯನಿಡುತ ನಡೆವ
ನಿನ್ನ ಸೌಂದರ್ಯವೇ
ಶೀಲಾ ಬಾಲಿಕೆ,

ಮೈ ಮುಚ್ಚುವ ಸೀರೆಯುಡುತ 
ರಂಗು ರಂಗಿನ ಬಳೆ ತೊಟ್ಟು
ಹಣೆಗೊಂದು ತಿಲಕವಿಟ್ಟು
ಮಲ್ಲಿಗೆ ಮುಡಿದ ಜಡೆಯೊಂದಿಗೆ
ಕಾಲ್ಗೆಜ್ಜೆ ಸದ್ದಿನೊಳು
ಓಡಾಡುವ ಪರಿ ಕಾಣುತ
ಮೈ ಮರೆತು ಸ್ತಬ್ದನಾದೆ,

ನನಗೊಲಿದ ಲಕ್ಷ್ಮಿ ನೀನು
ನಿನ್ನಲಿರೋ ಶಕ್ತಿಯೇನು
ಕ್ಷಣ ಕ್ಷಣಕೂ ನೀ ನುಡಿವ
ಮಾತುಗಳೇ ಸವಿ ಜೇನು
ನಿನಗಾಗಿ ಎದ್ದೇಳುವ
ಪ್ರೀತಿಯ ನಲ್ಲ  ನಾನು
ನನ್ನ ಪ್ರಪಂಚವೇ ನೀನು
       ✍️ಮಾಧವ ಅಂಜಾರು 🌷










Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ