ಹುಲುಮನುಜ (ಕವನ -48)
ಸಾಕಿ ಸಲಹುವವನಿರುವಾಗ
ನನಗ್ಯಾಕೆ ಚಿಂತೆ
ಸಂತೆಯಲ್ಲಿರೋ ಜೀವಕೆ
ಸದ್ದು ಗದ್ದಲದ ಗೋಜಿಲ್ಲ
ಯಾರೇನು ಹೇಳಿದರೂ
ಬೆಲೆ ನಿರ್ಧಾರವಾಗಿರದು
ಹುಲುಮನುಜ ನಾನು
ಸಾಗಲಿ ದಿನಗಳ ಕಂತೆ ,
ಉಸಿರು ಕೊಟ್ಟವನಿರುವಾಗ
ಇಲ್ಲ ಕತ್ತು ಹಿಡಿಯುವವರ ಚಿಂತೆ
ಮತ್ತು ಬಂದಿರುವ
ಹುಳ ಮನುಜನ ನಡುವೆ
ಜೀವನದ ಸಂತೆ
ಒಂದು ಕಡೆಯಿಂದ
ಇನ್ನೊಂದು ಕಡೆಗೆ ಸಾಗುವ
ಬದುಕ ಬಂಡಿಗಿರದಿರಲಿ ವ್ಯಥೆ
✍️ಮಾಧವ ಅಂಜಾರು 🌷
Comments
Post a Comment