ಲಗಾಮು (ಕವನ -87)
ಲಗಾಮು
******
ದಾರವಿಲ್ಲದ ಗಾಳಿಪಟ
ಎಷ್ಟು ಮೇಲೆ ಹಾರಾಡಿದರೂ
ಗಾಳಿಯ ರಭಸಕೆ ದಿಕ್ಕು ದೆಸೆಯಿಲ್ಲದೆ
ನೆಲ ಕಚ್ಚುವುದು ಖಂಡಿತ
ಲಗಾಮಿಲ್ಲದ ಕುದುರೆ
ಎಷ್ಟು ಓಡಾಡಿದರೂ
ಲಕ್ಷ್ಯವಿಲ್ಲದ ಜಾಗಕೆ ಓಡುತ
ಧೂಳೆಬ್ಬಿಸುವುದು ಸಹಜ
ಅಂಕುಶವಿಲ್ಲದ ಆನೆ
ಎಷ್ಟು ಬಲಶಾಲಿಯಾದರೂ
ಮದವೇರಿದ ಹುಚ್ಚಾಟದಲಿ
ಸಿಕ್ಕಿದ್ದನ್ನು ನಾಶಪಡಿಸುವುದು ನಿಜ
ಹಿಡಿತವಿಲ್ಲದ ಜೀವಕೆ
ವಿದ್ಯೆಯಿದ್ದರೂ, ಶಕ್ತಿಯಿದ್ದರೂ
ಐಶ್ವರ್ಯವಿದ್ದರೂ,
ಕ್ಷಣಮಾತ್ರಕೆ ಮುಗಿಯೋದು ನಿಜ
✍️ಮಾಧವ ನಾಯ್ಕ್ ಅಂಜಾರು 🌹
Comments
Post a Comment