ಸಾಮರ್ಥ್ಯ (ಕವನ -85)
ಸಾಮರ್ಥ್ಯ
*******
ಕತ್ತೆಯನ್ನೂ ಗೌರವಿಸಬೇಕು
ಭಾರಹೊತ್ತು ನಡೆಯುದನು ಕಂಡು
ಕುದುರೆಯನ್ನ ಮೆಚ್ಚಿದರೆ ಸಾಲದು
ಹುಲಿಯನ್ನೂ ಹೊಗಳಿದರೆ ಸಾಲದು
ಇಲಿಯನ್ನೂ ಗಮನಿಸಲೇ ಬೇಕು
ಜೀವಿಯ ಸಾಮರ್ಥ್ಯ ಅಳೆಯಬಾರದು,
ಹುಚ್ಚನನ್ನೂ ಹೀಗಳೆಯಬಾರದು
ಸಿರಿವಂತನನ್ನೂ ಹಿಂಬಾಲಿಸಬಾರದು
ಬಡವ ಬಲ್ಲಿದನ ಹಿಂಸಿಸಬಾರದು
ಇಂದು ಇರುವ ಸಾಮರ್ಥ್ಯವೆಲ್ಲ
ಶಾಶ್ವತವಲ್ಲ ಎಂಬುದ ಮರೆಯಬಾರದು
ಮನುಜಗೆ ವಿಕೃತಿ ಅತಿಯಾಗಿರಬಾರದು
✍️ಮಾಧವ ನಾಯ್ಕ್ ಅಂಜಾರು 🌹
Comments
Post a Comment