ದೇವರಂತೆ ಇರುವನು (ಕವನ -99)

ದೇವರಂತೆ ಇರುವನು
***************
ಸತ್ಯ ಹೇಳುತ್ತಿರುವವರಿಗೆ
ಸತ್ಯವನ್ನು ಬಿಟ್ಟು
ಸುಳ್ಳು ಹೇಳೋಕೆ
ಮುಜುಗರವಾಗುತ್ತದೆ

 ಸುಳ್ಳು ಹೇಳುವವರಿಗೆ
 ಸತ್ಯವನ್ನು ಬಿಟ್ಟು
 ಸುಳ್ಳು ಹೇಳೋದಕ್ಕೆ
 ಮುಜುಗರವಿಲ್ಲ

 ಕಳ್ಳತನ ಮಾಡುತ್ತಿದ್ದವನಿಗೆ
 ಕಳ್ಳತನ ಮಾಡದಿದ್ದರೆ
 ಇಂದು ಸಂಪಾದಿಸಿಲ್ಲ
 ಅನ್ನೋದು ಬಹಳ ಚಿಂತೆ

 ಬಡವ-ಬಲ್ಲಿದ ನಿಗೆ
 ಸಹಾಯ ಮಾಡುತ್ತಿದ್ದವ
 ಇಂದು ಸಹಾಯ ಮಾಡಲು
 ಆಗಲಿಲ್ಲವೆಂದರೆ ಬರೋದಿಲ್ಲ ನಿದ್ದೆ

 ಎಲ್ಲರಿಗಾಗಿ ಇರುವವನು
 ದೇವರಂತೆ ಇರುವನು
 ಸಮಾಜವನ್ನು ಕೆಡಿಸುವವನು
 ರಾಕ್ಷಸನಂತೆ ಇರುವನು
✍️ ಮಾಧವ ನಾಯ್ಕ್ ಅಂಜಾರು🙏

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ