ಸಂತೋಷ (ಕವನ -94)

ಸಂತೋಷ 
********
ಎನ್ನ ನಂಬಿದವಗೆ 
ಅನ್ನವ ಕೊಡು 
ಎನ್ನ ತುಳಿದವಗೆ 
ಹೊನ್ನನು ಕೊಡು 
ನಿನ್ನ ನಂಬಿರುವೆನಗೆ 
ಪಾದದ ಧೂಳನು ಕೊಡು 
ದೇವನೇ ಎನ್ನ ಬಾಯಾರಿಕೆಗೆ 
ನಿನ್ನ ಕಾಲನು ತೊಳೆದ 
ನೀರನು ಕೊಡು 

ದಿವ್ಯ ದೃಷ್ಟಿ ಬೇಡವೆನಗೆ 
ಇರುವ ದೃಷ್ಟಿಯು ಸಾಕೆನಗೆ 
ಕಣ್ಣು ಮುಚ್ಚಿಸು ಎನ್ನ 
ಲೋಕದ ಲೋಪ 
ತೋರಿಸಲೇ ಬೇಡವೆನಗೆ 
ಈ ಜನುಮ ಸಾಕೆನಗೆ 
ಕರೆದುಬಿಡು ನಿನ್ನ ಬಳಿಗೆ 
ಇಲ್ಲವೆಂದಾದರೆ 
ನನ್ನೆದೆಗೂಡಲಿ ಬಂದು ನೆಲೆ 

ಬದುಕಲಾರೆ ನಿನ್ನ ಬಿಟ್ಟು 
ನಗಲಾರೆನು ನಿನ್ನ ಹೊರತು 
ಉಸಿರಾಡಲಾರೆನು 
ನಡೆದಾಡಲಾರೆನು ದೇವ
ಕಣ್ಣೀರ  ಅಭಿಷೇಕ ನಿನಗೆ 
ನಿನ್ನ ಸಂತೋಷವೇ 
ತೃಪ್ತಿ ನೀಡಲೆನಗೆ 
ಎಲ್ಲಿದ್ದರೂ ನೀ ಬಂದು 
ಮುಕ್ತಿಯನು ಕೊಡು ಎನಗೆ 
✍️ಮಾಧವ ನಾಯ್ಕ್ ಅಂಜಾರು 🌹

Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ

( ಲೇಖನ -122) ಭೂ - ಕೈಲಾಸ