ವಿಚಾರ (ಕವನ -70)
ವಿಚಾರ
******
ಬದುಕಿರುವಾಗ ಹೇಗಿದ್ದೀಯ?
ಎಂದು ಕೇಳದವರು
ಸತ್ತಾಗ ಹೇಗೆ ಸತ್ತ
ಎಂದು ಕೇಳಿಬಿಟ್ಟರು!
ಹಸಿವಾದಾಗ ಊಟ ಮಾಡಿದಿಯಾ
ಎಂದು ಕೇಳದವರು
ಊಟ ಮಾಡಿದಾಗ
ಊಟವಾಯಿತ? ಎಂದು ಕೇಳಿಬಿಟ್ಟರು!
ಹಣವಿಲ್ಲದಾಗ
ಹಣ ಬೇಕಾ ಎಂದು ಕೇಳದವರು
ಹಣಗಳಿಸಿದಾಗ
ಹೆಣವಾಗುವವರೆಗೆ ಕಾಯ್ದುಬಿಟ್ಟರು!
✍️ಮಾಧವ ಅಂಜಾರು 🌷
Comments
Post a Comment