(ಲೇಖನ -34)ಕುವೈಟ್ ಸಮುದ್ರಕಿನಾರೆಯಲ್ಲಿ -ಪ್ರಕೃತಿ ಪ್ರೀತಿ

 ಕುವೈಟ್ ಸಮುದ್ರಕಿನಾರೆಯಲ್ಲಿ - ಪ್ರಕೃತಿ ಪ್ರೀತಿ 


ನಾವು ಹೋದಲ್ಲಿ ಬಂದಲ್ಲಿ, ನಿಂತಲ್ಲಿ ಕೂತಲ್ಲಿ ನಮ್ಮ ಅನುಕೂಲಕ್ಕಾಗಿ ಮೋಜು ಮಸ್ತಿಗಾಗಿ ತಿಂಡಿ ತಿನಸುಗಳನ್ನು  ಪ್ಲಾಸ್ಟಿಕ್ ಚೀಲ ಅಥವಾ ತಂಪು ಪಾನೀಯಗಳನ್ನು ಒಯ್ಯೋದು ಸಾಮಾನ್ಯವಾಗಿಬಿಟ್ಟಿದೆ.  ಅದೆಷ್ಟೋ ಜನರು ತನ್ನ ಸಂತೋಷದ ಕ್ಷಣಗಳನ್ನು ಅನುಭವಿಸಿ ಹೊತ್ತೊಯ್ದ ಎಲ್ಲಾ ವಸ್ತುಗಳನ್ನು ಕಸದ ತೊಟ್ಟಿಗಳಲ್ಲಿ ಹಾಕದೆ ಸಮುದ್ರ ಕಿನಾರೆಯಲ್ಲಿ ಬಿಸಾಕಿ ಹೋಗುತ್ತಾರೆ.  ಇದರಿಂದ ಪ್ರಕೃತಿ ಮಾಲಿನ್ಯ ಮಾಡುತ್ತಿರುವ ಬುದ್ದಿವಂತರೇ ಜಾಸ್ತಿ. 

  ಹೌದು ನಾನು  ಕೂಡ ನಮ್ಮ  ಮಕ್ಕಳೊಂದಿಗೆ  ಸೂರ್ಯಾಸ್ತದ ಸಮಯಕ್ಕೆ ತಂಗಾಳಿ ಸವಿಯಲು ಕುವೈಟ್ ಪಟ್ಟಣ ಬದಿಯಲ್ಲಿರೋ ಸಮುದ್ರ ಕಿನಾರೆಗೆ ಹೋಗಿದ್ದೆವು.   ನನ್ನೊಂದಿಗೆ ನನ್ನೆರಡು ಮಕ್ಕಳು,  ಹೆಂಡತಿ ಮತ್ತು  ಬಾರಕೂರಿನ ದಂಪತಿಗಳು ಕೂಡ ಇದ್ದರು.  ಕೊರೊನ ಭಯದಿಂದ ಎಲ್ಲರ ಮುಖದಲ್ಲಿ ಇದ್ದ  ಮಾಸ್ಕ್ ಗಳು ಸಮುದ್ರ ಕಿನಾರೆಯಲ್ಲಿ ನಮ್ಮ ಕಿಸೆಯೊಳಗೆ ಸೇರಿಬಿಟ್ಟಿತು.  ಇನ್ನೇನು ನಮ್ಮ ಚಪ್ಪಲಿಗಳನ್ನು ತೆಗೆದು ನೀರಂಚಲಿ ಆಡುವ ಹೆಜ್ಜೆಯನ್ನಿಡಬೇಕು ಅನ್ನುವಷ್ಟರಲ್ಲಿ ಕುವೈಟ್ ಪ್ರಜೆಯೊಬ್ಬಳು ತನ್ನ ಕೈಯಲ್ಲಿ ಹೊಯ್ಗೆ ಅಂಟಿದ್ದ ಒಂದು ಪ್ಲಾಸ್ಟಿಕ್ ಲೋಟವನ್ನು ಎತ್ತಿ ತೋರಿಸುತ್ತಲೇ,  ಹೇಳಿ ಬಿಟ್ಟರು "  humans are spoiling mother earth " ನಾವೆಲ್ಲರೂ ಸೇರಿ ಈ ಭೂಮಿಯನ್ನು ಸ್ವಚ್ಛ ಸುಂದರವಾಗಿಸಲು ಸಣ್ಣ ಪ್ರಯತ್ನ ಮಾಡಿದರೂ ಸಾಕು ಅಂತ ಹೇಳಿದರು.  ಅವರ ಮಾತನ್ನು ಕೇಳುತ್ತಲೇ, ನಾವು ಕೂಡ ಪ್ರಕೃತಿಯನ್ನು ಪ್ರೀತಿಸುವವರು ನಿಮ್ಮಂತಹ ಉತ್ತಮ ಮನುಜರಿಗೆ ದೇವರು ಒಳಿತನ್ನು ಮಾಡಲಿ ಎಂದು ಹೇಳಿದಾಗ ಅವರ ಮುಖದಲ್ಲಿ ಮುಗುಳುನಗೆ.  ನಮಗೆ ಹೇಳಿದ ನಂತರ ಇನ್ನುಳಿದ ಜನರಿಗೆ ಅರಿವು ಮೂಡಿಸಲು ಮಹಿಳೆ ಹೆಜ್ಜೆ ಹಾಕಿದಳು.  ನನ್ನ ಮನದಲ್ಲಿ ಆ ಮಹಿಳೆಯ ಪ್ರಕೃತಿಯ ಪ್ರೀತಿ ತುಂಬಾ ಖುಷಿ ಕೊಟ್ಟಿತು. 

ಸಾವಿರಾರು ಜನರು ಸಮುದ್ರ ಕಿನಾರೆಗೆ ಹೋದಾಗ ಕಸ,  ಗಾಜಿನ ಬಾಟ್ಲಿ,  ಪ್ಲಾಸ್ಟಿಕ್ ಗಳನ್ನು ಕಡಲ ತೀರದಲ್ಲಿ ಕಂಡಿರಬಹುದು.  ಅಲ್ಪ ಪ್ರಮಾಣದಲ್ಲಿ ಅಲ್ಲ ಸಮುದ್ರದ ಎಲ್ಲಾ ಜಾಗದಲ್ಲೂ ಕಂಡಿರಬಹುದು.  ಇದು ವಿದ್ಯಾವಂತ ಜನಗಳು ಮಾಡುವ ನಿರ್ಲಕ್ಷ್ಯ, ಸಮುದ್ರ ಜೀವಿಗಳು ಕಷ್ಟಪಡುವಂತೆ ಮಾಡುತ್ತಿವೆ.  ಅದೆಷ್ಟೋ ಮೀನು, ಆಮೆ,  ದೊಡ್ಡ ತಿಮಿಂಗಿಲಗಳು ಕೂಡ ಪ್ಲಾಸ್ಟಿಕ್ ಗಳನ್ನು ತಿಂದು ಸಾಯುತ್ತಿವೆ.  ಮನುಷ್ಯರಾದ ನಾವೆಲ್ಲರೂ ಬುದ್ದಿವಂತರು ಆದರೆ ಪ್ರಕೃತಿಯನ್ನು ಹಾಳುಗೆಡವಿದಂತೆ ಪ್ರಕೃತಿಯು ತನ್ನ ಕೋಪವನ್ನು ಆಗಾಗ್ಗೆ ತೋರಿಸುತ್ತಿದೆ. ಮಾಲಿನ್ಯ ಅತಿಯಾಗುತ್ತಿದ್ದಂತೆ ಭೂಮಿ ನಲುಗುತ್ತಿದೆ,  ಕಣ್ಣೀರು ಹಾಕುತ್ತಿದೆ. 

       ನಮ್ಮ ಇಂದಿನ ಜನಾಂಗದಲ್ಲಿ,  ಪ್ರಕೃತಿಯ ಸೌಂದರ್ಯ ಕಾಪಾಡಲು ಪಾಠ ಶಾಲೆಗಳಲ್ಲಿ ಹೇಳಿಕೊಟ್ಟರೂ, ಜಾಗೃತಿ ಕಾರ್ಯಕ್ರಮಗಳು ನಡೆದರೂ  ಅದನ್ನು ಪಾಲಿಸುವ ಜನರು ಕೆಲವೇ ಕೆಲವರು,  ಪ್ರಕೃತಿಯನು ಪ್ರೀತಿಸುವರು ಕೂಡ ಬೆರಳಣಿಕೆಯಷ್ಟು ಜನರು.  ಪ್ರಕೃತಿ ಮಾಲಿನ್ಯ ತಡೆಗಟ್ಟೋಣ  ಭೂಮಿ ತಾಯಿಯ ಉಳಿವಿಗಾಗಿ ಶ್ರಮಿಸೋಣ,  ಮನುಜರಾಗಿ ಬದುಕೋಣ.

✍️ಮಾಧವ ನಾಯ್ಕ್ ಅಂಜಾರು 🌹🙏












Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ