ಅವಕಾಶ (ಕವನ -75)
ಅವಕಾಶ
*******
ನಕ್ಕು ನಗಿಸಲು
ಅವಕಾಶ ಸಿಕ್ಕರೆ
ಇಂದೇ ಮಾಡಿಬಿಡಿ
ನಾಳೆ ಎಂಬುದ ಯಾರು ಬಲ್ಲರು?
ಕನಸು ಕಾಣಲು
ಆರಂಭಿಸಿದ್ದರೆ
ನನಸಾಗಿಸಲು ಪ್ರಯತ್ನಪಡಿ
ನಾಳೆ ಎಂಬುದ ಯಾರು ಬಲ್ಲರು?
ಒಳಿತು ಮಾಡಲು
ಹಂಬಲವಿದ್ದರೆ
ಈಗಲೇ ಮಾಡಿಬಿಡಿ
ನಾಳೆ ಎಂಬುದನು ಯಾರು ಬಲ್ಲರು?
ಪ್ರೀತಿ ವಾತ್ಸಲ್ಯವ
ತೋರಬೇಕಿದ್ದರೆ
ತೋರಿಸಿಬಿಡಿ
ನಾಳೆ ಎಂಬುದ ಯಾರು ಬಲ್ಲರು?
✍️ಮಾಧವ ಅಂಜಾರು 🙏🌷
Comments
Post a Comment