ಹಸಿವು (ಕವನ -74)
ಹಸಿವು
******
ಹಣವಿಲ್ಲದಾಗ
ಸಿರಿವಂತನ ಜೊತೆಗೆ
ಹೋಗಬೇಡಿ
ಹಸಿವಾದಾಗ
ಸಿರಿವಂತನ ಮನೆಲಿ
ಊಟ ಕೇಳಬೇಡಿ
ಹಣದ ಹಸಿವು
ಸಿರಿವಂತರಿಗೆ ಜಾಸ್ತಿ
ಮರೆಯಬೇಡಿ
ಗುಣದ ಹಸಿವು
ಬಡವನಿಗೆ ಜಾಸ್ತಿ
ತಿಳಿದುಬಿಡಿ
ಹೃದಯವಂತರು
ಸಿರಿವಂತನಾದರೆ
ಕೈ ಮುಗಿದುಬಿಡಿ
ಶ್ರಮಜೀವಿಯೊಬ್ಬ
ಸಿರಿವಂತನಾದರೆ
ಗುಟ್ಟು ತಿಳಿದುಬಿಡಿ
✍️ಮಾಧವ ಅಂಜಾರು 🙏🌷
Comments
Post a Comment