ಮರೆಯಬೇಡ (ಕವನ -55)
ಬದುಕಿರುವಾಗ
ಸಾಯಬೇಕೆಂದು
ಶಪಿಸಿಕೊಳ್ಳಬೇಡ
ಸಾವು ಬಂದಾಗ
ಬದುಕಲೆನಿಸಿದರೂ
ಬದುಕಲಾಗದು!
ಆರೋಗ್ಯವಿರುವಾಗ
ಇದ್ದವರಿಗೆಲ್ಲ
ತೊಂದರೆ ಮಾಡಬೇಡ
ಅನಾರೋಗ್ಯ ಬಿದ್ದಾಗ
ಮಾಡಿದ ಪಾಪ
ಜೊತೆಗಿರುವುದು ಮರೆಯಬೇಡ!
ಸಂತಸವಿರುವಾಗ
ಕೆಟ್ಟ ಘಟನೆಗಳ ನೆನೆದು
ಚಿಂತಿಸಬೇಡ
ಬೇಸರವಾದಾಗ
ಸಂತಸದ ಕ್ಷಣಗಳನು
ನೆನೆಯಲು ಮರೆಯಬೇಡ!
✍️ಮಾಧವ ಅಂಜಾರು 🌷
Comments
Post a Comment