ಸಿಹಿಜೇನಿನ ಗೂಡಿನೊಳಗೆ ನಿನ್ನದೇ ಮಧುರತೆ ಮಳೆಯ ತುಂತುರು ಹನಿಗಳಲಿ ನಿನ್ನದೇ ಸ್ಪರ್ಶವೆ.. ಮನದಾಳದ ಪ್ರತೀ ಕನಸಿನಲ್ಲಿ ನಿನ್ನದೇ ಉಪಸ್ಥಿತಿಯೆ ಚಂದ್ರನು ಮಿಂಚುವ ರಾತ್ರಿ ಕೂಡ ನಿನ್ನದೇ ಹೊಳಪಿದೆ ನನ್ನ ಹೃದಯದ ಪ್ರತೀ ಬಡಿತಕೂ ನಿನ್ನದೇ ನಾದವಿದೆ ✍🏻ಮಾಧವ. ಕೆ. ಅಂಜಾರು
ಓ ನನ್ನ ಪ್ರೇಯಸಿ, ನೀ ನನ್ನ ಕೀರ್ತಿ, ನಿನ್ನೊಡಲ ಪ್ರೇಮಕೆ ನಾನೇ ಸಾರಥಿ. ನಿನ್ನ ನಗುವ ಕಾಣಲು ಈ ಜೀವ ಕಾತುರ, ಬಯಸಿ ಬಂದ ಭಾಗ್ಯ, ನೀ ನನ್ನ ದೇವತೆ. ನಿನ್ನ ಕಣ್ಣಲಿ ಕಂಡೆ ಸ್ವರ್ಗದ ಸೌಂದರ್ಯ, ನಿನ್ನ ಮಾತಲಿ ಕೇಳೆ ಮನದ ಮಧುರ ಧ್ವನಿ. ನಿನ್ನ ಹೆಜ್ಜೆಯ ದಾರಿಗೆ ಹೂಗಳು ಅರಳುವವು ನಿನ್ನ ನೆರಳಾದರೂ ಸಾಕು ಜೀವನ ಪೂರ್ಣವಾಗುವುದು. ✍🏻ಮಾಧವ ಕೆ ಅಂಜಾರು
ಕಾಡುವೆ ಕನಸಾಗಿ ಹಾರುವ ಹಕ್ಕಿಯಾಗಿ ನೀನಿರುವೆ ನನ್ನ ಜೊತೆಯಾಗಿ ಈ ಪ್ರೀತಿಯ ಬೆಸುಗೆ ಇರಲು ಜೊತೆಯಾಗಿ ನೆಮ್ಮದಿ ನನಗಾಗಿ ತಂಪಾಗಿ ಬೀಸುವ ಗಾಳಿಯಂತೆ ಇಂಪಾಗಿ ಹಾಡುವ ಕೋಗಿಲೆಯಂತೆ ನಿನ್ನ ಪ್ರತೀ ನುಡಿಯು ಇರಲಿ ನನ್ನ ಜೊತೆಯಾಗಿ ಕಾಡುವ ಕನಸಿಗೆ ಜೊತೆಗಿರು ಉಸಿರಾಗಿ ✍🏻ಮಾಧವ ಕೆ ಅಂಜಾರು
ಒಂದಷ್ಟು ಅಮಾಯಕರನ್ನು ಬಲಿಕೊಟ್ಟು ದಿನಕ್ಕೆ ಕುಡಿದ ಮೂರು ಬೀರು ತೆಗೆದುಕೊಂಡ ಒಂದು ದೊಡ್ಡ ಕಾರು ಮನೆಯೊಳಗೆ ಭಯವೇ ಮನೆಯ ಹೊರಗೂ ಭಯವೇ ಎಲ್ಲಿ ಹೋದರೂ ಅವನಿಗಿಲ್ಲ ನೆಮ್ಮದಿ ಒಂದು ಚೂರು ಸಂಪಾದಿಸಿದ ಸಂಪತ್ತೆಲ್ಲ ಕಣ್ಣಿಗೆ ಕಾಣದ ಶಾಪವಾಗಿ ನಿದ್ದೆಯನ್ನೇ ಕದಿಯುತಿದೆ ನಿಶ್ಶಬ್ದದ ಕೂಗು ಆಗಿ ನಗುವ ಮುಖದ ಹಿಂದೆ ಕಡಿದುಕೊಳ್ಳುವ ಪಶ್ಚಾತ್ತಾಪ ಮನದಾಳದ ಕತ್ತಲಿಯಲ್ಲಿ ಹರಿದು ಹೋಗುತಿದೆ ಅವನ ಸ್ವಭಾವ ಇತರರ ಕಣ್ಣೀರಿನಿಂದ ಕಟ್ಟಿದ ಆ ಅರಮನೆ ಒಂದು ದಿನ ಕುಸಿಯುತ್ತದೆ ಸತ್ಯದ ಭಾರ ತಡೆಯದೆ ಧನವೇ ದೇವರೆಂದವನು ಮಾನವೀಯತೆ ಮರೆತವನು ಕೊನೆಗೆ ಅರಿಯುವನು ನೆಮ್ಮದಿಯ ಬೆಲೆ ಹಣವಲ್ಲವೆಂದು ✍🏻ಮಾಧವ ಕೆ ಅಂಜಾರು
ನೇರ ಮಾತು ಕಷ್ಟವೇನಿಸಿದರೂ ಸತ್ಯದ ದಾರಿ ತೋರಿಸುತ್ತದೆ ಸುತ್ತಿ ಬಳಸಿ ಆಡುವ ಮಾತು ಕ್ಷಣಕ್ಕೆ ಸಿಹಿಯಾದರೂ ಮನದಾಳದಲ್ಲಿ ಕಹಿ ಬಿಡುತ್ತದೆ ಹೆಚ್ಚು ಮಾತುಗಳಿಂದ ಮನಸುಗಳು ದೂರವಾಗುವವು ಅಲ್ಪ ಮಾತಿನಲ್ಲೇ ಅರ್ಥಗಳು ಆಳವಾಗುವವು ಮೌನದೊಳಗಿನ ಮಾತುಗಳು ಹೃದಯವನ್ನು ಸ್ಪರ್ಶಿಸುವವು ಕಡಿಮೆ ಮಾತಾಡಿ ಬದುಕಿದರೆ ಶಾಂತಿ ನಮ್ಮನ್ನು ಸೇರುವದು ಸತ್ಯವೊಂದು ಕಠಿಣವಾದರೂ ಜೀವನವನ್ನು ಸರಿಪಡಿಸುವುದು ಸುಳ್ಳಿನ ಸಿಹಿ ಹೊದಿಕೆಯಲಿ ನಿಜದ ನೋವು ಮರೆವುದಿಲ್ಲ ಹೆಚ್ಚು ಮಾತುಗಳ ಗದ್ದಲಕ್ಕಿಂತ ಮೌನವೇ ಒಳ್ಳೆಯ ಗೆಳೆಯ ✍🏻ಮಾಧವ. ಕೆ. ಅಂಜಾರು
ಬದುಕೊಂದು ಕವನ ಅಲ್ಲಿಯ ಏರಿಳಿತಗಳೇ ಜೀವನ. ಇಂದು-ನಾಳೆಯ ಹೊಸ ಕನಸಿನ ಪುಟಗಳು, ತೆರೆಯುವ ಕ್ಷಣದಲ್ಲಿ ನನಸಾಗುವದೇ ಜೀವನ. ಸಂತಸದ ಸುರಿಮಳೆಯಲಿ ನಗು ಮೂಡುತ್ತದೆ, ದುಃಖದ ನೆರಳಲ್ಲಿ ಮನಸ್ಸು ಗಾಢವಾಗುತ್ತದೆ. ಪ್ರತಿ ಹೆಜ್ಜೆಯಲ್ಲೂ ಪಾಠವೊಂದು ಬಿಟ್ಟು, ಕಾಲವು ನಮ್ಮನ್ನು ರೂಪಿಸುತ್ತಿದೆ. ಆಸೆಯ ದೀಪಗಳು ದಾರಿಯನ್ನು ತೋರಿಸಿ, ನಂಬಿಕೆಯ ಬೆಳಕು ಹೃದಯ ತುಂಬಿ, ಬಿದ್ದಾಗಲೂ ಮತ್ತೆ ಎದ್ದೇಳುವ ಶಕ್ತಿ— ಅದೇ ಬದುಕಿನ ಸತ್ಯ. ಕ್ಷಣ ಕ್ಷಣವೂ ಕಥೆಯಾಗುತ್ತಾ, ನಮ್ಮ ಹೆಜ್ಜೆಗಳು ಗುರುತು ಬಿಡುತ್ತಾ, ಅಂತಿಮವಾಗಿ ನೆನಪಾಗುವುದು ನಾವು ನಡೆದ ಪಯಣವೇ ಜೀವನ. ✍🏻ಮಾಧವ ಕೆ ಅಂಜಾರು
ತಾಯಿಯಾದವಳಿಗೂ ತಾಯಿಯ ಮಮತೆ ಬೇಕು ದುಃಖವಿರುವಾಗ ಸಂತೋಷವಿರುವಾಗ ತಾಯಿ ಜೊತೆಗಿರಬೇಕು, ತಂದೆಯಾದವನಿಗೂ ತಂದೆಯ ಮಮತೆ ಬೇಕು ಸವಾಲೆದುರಾದಾಗ ಜಗವ ಗೆಲ್ಲಬೇಕಾದಾಗ ತಂದೆ ಜೊತೆಗಿರಬೇಕು ತಂಗಿಯಾದವಳಿಗೂ ಅಣ್ಣನ ಮಮತೆ ಬೇಕು ತಂದೆ ತಾಯಿಯಂತೆ ಪ್ರೀತಿ ನೀಡಬೇಕಾದಾಗ ಭಯವಿಲ್ಲದೆ ಬದುಕಬೇಕಾದಾಗ ✍🏻ಮಾಧವ ಕೆ ಅಂಜಾರು
ಅವನು ತಂದ ಒಡವೆಯೊಳಗೆ ಬಡವರ ಶಾಪವಿತ್ತು ದರೋಡೆಯ ಮೂಲವಿತ್ತು ಮೋಸದ ಜಾಲಾವಿತ್ತು ಕಣ್ಣೀರ ಹನಿಯಿತ್ತು, ಇವನು ತಂದ ಒಡವೆಯೊಳಗೆ ನಿಯತ್ತಿನ ಏಣಿಇತ್ತು ಸಂತೋಷದ ಕ್ಷಣಗಳಿತ್ತು ಪ್ರೀತಿಯ ಪುಟಗಳಿತ್ತು ಭರವಸೆಯ ದಿನಗಳಿತ್ತು ಅವನ ಅಂತಸ್ತು ಬೆಳೆಯುತ್ತಿತ್ತು ಆತ್ಮಸಾಕ್ಷಿ ಅಳುತ್ತಳಿತ್ತು ಇವನ ಅಂತಸ್ತು ಬೆಳೆಯುತಿತ್ತು ಅಂತರಾಳದ ನೆಮ್ಮದಿಯಿತ್ತು. ✍🏻ಮಾಧವ. ಕೆ ಅಂಜಾರು
ಮೋಸ ಮಾಡುವುದೇ ಅವನ ವೃತ್ತಿಯಾಗಿತ್ತು ಅದಕ್ಕೆ ಮೋಸಮಾಡುತ್ತಲೇ ಅವನಿಗೆ ತೃಪ್ತಿಯಾಗುತಿತ್ತು, ಕಾಸು ಮಾಡುವುದೇ ಅವನ ಗುರಿಯಾಗಿತ್ತು ಅದಕ್ಕೆ ಸುಳ್ಳು ಹೇಳುತ್ತಲೇ ಅವನಿಗೆ ದಿನಹೋಗುತಿತ್ತು, ವೇಷ ಬದಲಿಸುವುದೇ ಅವನ ಹವ್ಯಾಸವಾಗಿತ್ತು ಅದಕ್ಕೆ ಬಣ್ಣ ಬಳಿಯುತ್ತಲೇ ಅವನ ಬಣ್ಣ ಬಯಲಾಗುತಿತ್ತು. ✍🏻ಮಾಧವ ಕೆ ಅಂಜಾರು
ಕೃತಕ ಬುದ್ಧಿಮತ್ತೆ- ( Artificial Inteligence ) ಮತ್ತು ಬುದ್ಧಿವಂತಿಕೆ. ವಿಜ್ಞಾನ ಮುಂದುವರಿಯುತ್ತಿರುವಂತೆ ತಾಂತ್ರಿಕ ಕ್ಷೇತ್ರದಲ್ಲಿ ಬಹಳಷ್ಟು ಬೆಳವಣಿಗೆಗಳನ್ನು ಕಾಣುತ್ತಿರುವ ನಾವುಗಳು, ಇತ್ತೀಚಿನ ದಿನಗಳಲ್ಲಿ AI ಟೆಕ್ನಾಲಜಿಯನ್ನು ಹೆಚ್ಚಾಗಿ ಉಪಯೋಗಿಸಿಕೊಳ್ಳುತ್ತಿದ್ದೇವೆ. ಅದರಲ್ಲೂ ವಿಭಿನ್ನ ಕಂಪನಿಗಳ ವಿವಿಧ ತರಹದ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿ ತನ್ನ ಗ್ರಾಹಕರನ್ನು ಬೆಳೆಸಿಕೊಳ್ಳುತ್ತಿದೆ. ಈ AI ಟೆಕ್ನಾಲಜಿ, ರೋಬೋಟ್, ಕಂಪ್ಯೂಟರ್, ವಿಮಾನ, ಮೊಬೈಲ್ ಹಾಗೂ ಯುದ್ಧ ತಂತ್ರಗಳಲ್ಲಿ ಕೂಡ ಉಪಯೋಗಿಸುವ ಮಟ್ಟಿಗೆ ಬೆಳೆದಿದ್ದು ಇದೊಂದು ಬಹಳ ದೊಡ್ಡ ಬದಲಾವಣೆಯಾಗಿದೆ. ಅದರೊಂದಿಗೆ ಅವಲಂಬಿತಾರಗುತ್ತಿರುವ ನಾವು ನಮ್ಮ ಸ್ವತಃ ಬುದ್ದಿವಂತಿಕೆಯನ್ನು ತೀರಾ ಕಡಿಮೆಯಾಗಿ ಉಪಯೋಗಿಸುವ ಮಟ್ಟಕ್ಕೆ ಬರುತ್ತಿದ್ದೆವೋ ಅನಿಸುತ್ತಿದೆ. ಅದರಲ್ಲೂ ಒಂದು ಕಾಲದಲ್ಲಿ ತೆಗೆದ ಕಪ್ಪು ಬಿಳಿ ಚಿತ್ರಗಳನ್ನು ಇಂದಿನ ಯುಗದಲ್ಲಿ ಕುಣಿಯುವಂತೆ, ಮಾತನಾಡುವಂತೆ ಮಾಡುತ್ತಿರುವ AI ಇನ್ನೂ ಮುಂದಿನ ದಿನಗಳಲ್ಲಿ ಏನೆಲ್ಲಾ ಮಾಡಬಹುದು ಅಲ್ಲವೇ? ಇಲ್ಲಿ ಮನುಷ್ಯನ ಬುದ್ದಿವಂತಿಕೆ ಏನನ್ನೂ ಮಾಡಬಹುದು ಎಂಬ ಸಂದೇಶ ಕೊಡುತ್ತಿದೆ. ಕೃತಕ ಬುದ್ದಿವಂತಿಕೆ ಬುದ್ದಿವಂತರಿಂದಲೇ ಮಾಡಲ್ಪಟಿದ್ದು ಆದರೆ ಅದನ್ನು ತಿಳಿಯದ ಇಂದಿನ ಕೆಲವು ಮಕ್ಕಳು ತನ್ನ ದೈನಂದಿನ ಚಟುವಟಿಕೆಗಳಲ್ಲಿ ಅತಿಯಾಗಿ ಅವಲಂಬಿತರಾಗುತ್ತಿದ್ದ...