ದೇವರಿಲ್ಲ (ಕವನ -84)
ದೇವರಿಲ್ಲ
********
ದೇವರನ್ನೇ ನಂಬದಿದ್ದವ
ಕಷ್ಟ ಬಂದಾಗ ಕೈಮುಗಿದ
ದೇವರನ್ನೇ ದೂರುತ್ತಿದ್ದವ
ನೋವನುಭವಿಸುವಾಗ
ದೇವರನ್ನು ಕರೆದ
ದೇವನೊಬ್ಬನೇ ಅನ್ನುತಿದ್ದವ
ಕಷ್ಟ ಸುಖದಲೂ ನೆನೆದ
ನಾನೇ ದೇವರು ಅನ್ನುತಿದ್ದವ
ದೇವಾ ದೇವನೆನುತ
ಜೀವವನೇ ತೊರೆದ
ದೇವರ ಹೆಸರಲಿ ಹಣಮಾಡುತಿದ್ದವ
ಐಶ್ವರ್ಯ ಗಳಿಸಿ ಮೆರೆದ
ದೇವನೊಬ್ಬ ನೋಡುತಲಿರುವ
ತಿಳಿದೂ ತಿಳಿಯದಂತೆ ನಡೆದ
ಕೊನೆಗಾಲಕೆ ಪಾಪವನ್ನೆಲ್ಲ ನೆನೆದು
ಕೊರಗಿ ಕೊರಗಿ ದೇವರನ್ನೇ ನೆನೆದ
✍️ಮಾಧವ ಅಂಜಾರು 🌷
Comments
Post a Comment