ಸಂಕೇತ (ಕವನ -106)


ಸಂಕೇತ
******
ನಿಮಗೊಬ್ಬರು 
ಗೌರವಿಸುತ್ತಾರೆಂದರೆ
ಅದವರ ಸದ್ಗುಣ ಸಂಕೇತ,
ನಿಮಗೊಬ್ಬರು
ಕರೆದು ಮಾತಾಡುತ್ತಾರೆಂದರೆ
ಅಕ್ಕರೆಯ ಸಂಕೇತ,
ನಿಮಗೊಬ್ಬರು
ಪ್ರತಿ ಮಾತಿಗೂ ನಗಿಸುತ್ತಾರೆಂದರೆ
ಅವರಲ್ಲಿರೋ ಪ್ರೀತಿ ಸಂಕೇತ,
ಕೆಲವರು  ಬುದ್ಧಿಗಾಗಿ
ಬಯ್ಯುತ್ತಾರೆಂದರೆ
ಪ್ರೀತಿ ಹೆಚ್ಚಿರೋ ಸಂಕೇತ,
ಕೆಲವರು ಬೆನ್ನಹಿಂದೆ
ಮಾತಾಡುತ್ತಾರೆಂದರೆ
ಮಗ್ಗುಲಲ್ಲಿ ಕತ್ತಿ ಇರುವ ಸಂಕೇತ,
ಒಬ್ಬೊಬ್ಬರು ಕುಹಕ ನಗು
ನಗುತ್ತಿರುತ್ತಾರೆಂದರೆ
ಕಲ್ಮಶ ಮನಸಿನ ಸಂಕೇತ,
✍️ಮಾಧವ ಅಂಜಾರು🙏🌹





Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ