ಒಂದೆರಡು ಬೈಗುಳ(ಕವನ -129)


ಬೆನ್ನಹಿಂದೆ
ತೆಗಳುವವರಿಗಿಂತ
ಕಣ್ಣಮುಂದೆ
ಮುನಿಯುವವರು ಲೇಸು
ತೆಗಳಿಕೆ ವಿವಿಧವಿರಬಹುದು
ನಾನು ಕೇಳಿರೋದಿಲ್ಲ
ಅಂತಿಂತು ನಮಗೆ
ಅರ್ಥವಾಗೋದಿಲ್ಲ
ಅವರ ಚಟಕ್ಕೂ
ಲಗಾಮಿರೋದಿಲ್ಲ,
ಒಂದೆರಡು ಬೈಗುಳ
ಎನ್ನನಿನಿತು ನೋಯಿಸಬಹುದು
ಕೇಳಿದ ಮಾತುಗಳೆಲ್ಲ
ಇನ್ನೊಂದು ಸಲ
ವಿಮರ್ಶಿಸಬಹುದು
ತಪ್ಪೆಂದು ತಿಳಿದರೆ
ತಿದ್ದಿಕೊಳ್ಳಬಹುದು
ಇಲ್ಲದಿದ್ದರೆ ಒಂದಷ್ಟು
ದೂರ ಸರಿಯಬಹುದು !
     ✍️ಮಾಧವ ಅಂಜಾರು 🌹






Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ