ಮೀನುಗಾರನ ಬವಣೆ (ಕವನ -102)

ಮೀನುಗಾರನ ಬವಣೆ
****************
ಭೋರ್ಗರೆವ ಸಮುದ್ರವ
ಲೆಕ್ಕಿಸಲಿಲ್ಲ
ಕಾಯಕದ ಗುಂಗಲಿ
ಜೀವ ಭಯವಿಲ್ಲ
ಕಗ್ಗತ್ತಲೆ, ಬೆಳದಿಂಗಳು
ಸಮಾನವೇ ಎಲ್ಲಾ
ಮೀನುಗಾರನ
ನೋವನು ಕೇಳೋರಿಲ್ಲ,

ಸಿಕ್ಕಿದ ಮೀನನು
ಸುರಿದರು ದಡದಲಿ
ಕಿಕ್ಕಿರಿದ ಜನರ
ಹಾರಾಟವಿಲ್ಲಿ
ರಾಶಿಗೆ ಸಾವಿರಾರು
ಬುಟ್ಟಿಗೆ ಸುಮಾರು
ಕಷ್ಟದಿ ಸಿಕ್ಕಿದ ಮೀನಿಗೆ ಕೊಟ್ಟರು
ಐನೂರರ ಬದಲು ಮುನ್ನೂರು,

ಮೀನುಗಾರನ ಮೈತುಂಬ
ಘಮ ಘಮ ವಾಸನೆ
ಹೇಳುವರು ಕೆಲವರು
ಮೀನು ಬಹಳ ವಾಸನೆ
ಮೂಗುಮುಚ್ಚುತಲೇ
ತೋರ್ಪಡಿಸುವರು ಯಾತನೆ
ಆದ್ರೆ ಅರಿತವರಿಲ್ಲ
ಮೀನುಗಾರನ ಬವಣೆ,

ಸಂಸಾರದ ಹೊಣೆ
ಮೀನು ವ್ಯಾಪಾರದ ಬವಣೆ
ಎಲ್ಲವೂ ಸೇರಿದಾಗ
ದೇವರೇ ಮಾಡು ರಕ್ಷಣೆ
ಮೀನು ತಿನ್ನೋರೆಲ್ಲ ಸೇರಿ
ಮಾಡಿರೆಲ್ಲರೂ ಪ್ರಾರ್ಥನೆ
ಮೀನುಗಾರನ ದೋಣಿ
ತುಂಬಿಬರಲಿ ಮೀನಲಿ
ಅವನ ಜೀವನ ಜಯಿಸಲಿ









Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ