ಅಲ್ಲಲ್ಲಿ ಹುಡುಕುತಿರುವೆ(ಕವನ -150)
ಅಲ್ಲಲ್ಲಿ ಹುಡುಕುತಿರುವೆ
ಕಣ್ಣಿಗೆ ಕಾಣದ ದೇವರ
ಎಲ್ಲೆಲ್ಲೂ ನಮಿಸುತ್ತಿರುವೆ
ಕಾಣೋಕೆ ಸಿಗದ ದೇವರ,
ಶಿಲೆಯಾಗಿ ನೆಲೆಯಾಗಿ
ಅಳಿಯದೇ ಸ್ಥಿರವಾಗಿ
ಕಾಣಸಿಗುವ ರೂಪದಲಿ
ಬೇಡುತಿರುವೆ ವರ
ಗತಿನೀನೆ ಈಶ್ವರ
ಜೊತೆಯಾಗಿರೆಂದಿಗೂ
ಎನ್ನ ಭಕ್ತಿ ನಿನಗೆ ಸ್ಥಿರ,
ನಿನ್ನ ನಂಬದವರ ಬಳಿ
ನನ್ನ ಬಿನ್ನಹವೇಕೆ?
ನೀ ಬರೀ ಕಲ್ಲೆಂದು
ದೂಷಿಸುವವರ ಬಳಿ
ಎನ್ನ ಒಯ್ಯುವಿಯೇಕೆ
ಹಣ್ಣಾಗಿ ಹೋಗೋ ಜೀವಕೆ
ಹೊನ್ನ ಸಿರಿ ಏತಕೆ
ಎನ್ನ ನಿನ್ನೊಳಾಗಿಸು ಶಿವನೇ
✍️ಮಾಧವ ನಾಯ್ಕ್ ಅಂಜಾರು 🌹
ಕಣ್ಣಿಗೆ ಕಾಣದ ದೇವರ
ಎಲ್ಲೆಲ್ಲೂ ನಮಿಸುತ್ತಿರುವೆ
ಕಾಣೋಕೆ ಸಿಗದ ದೇವರ,
ಶಿಲೆಯಾಗಿ ನೆಲೆಯಾಗಿ
ಅಳಿಯದೇ ಸ್ಥಿರವಾಗಿ
ಕಾಣಸಿಗುವ ರೂಪದಲಿ
ಬೇಡುತಿರುವೆ ವರ
ಗತಿನೀನೆ ಈಶ್ವರ
ಜೊತೆಯಾಗಿರೆಂದಿಗೂ
ಎನ್ನ ಭಕ್ತಿ ನಿನಗೆ ಸ್ಥಿರ,
ನಿನ್ನ ನಂಬದವರ ಬಳಿ
ನನ್ನ ಬಿನ್ನಹವೇಕೆ?
ನೀ ಬರೀ ಕಲ್ಲೆಂದು
ದೂಷಿಸುವವರ ಬಳಿ
ಎನ್ನ ಒಯ್ಯುವಿಯೇಕೆ
ಹಣ್ಣಾಗಿ ಹೋಗೋ ಜೀವಕೆ
ಹೊನ್ನ ಸಿರಿ ಏತಕೆ
ಎನ್ನ ನಿನ್ನೊಳಾಗಿಸು ಶಿವನೇ
✍️ಮಾಧವ ನಾಯ್ಕ್ ಅಂಜಾರು 🌹
Comments
Post a Comment