(ಲೇಖನ -9)ಸಮಾಜ ಸೇವಕರು ದೇಶದ ಸೈನಿಕರಿದ್ದಂತೆ, ಸಮಾಜದ ಸೇವೆ ಎಂದರೆ ಅಷ್ಟು ಸುಲಭದ ಮಾತಲ್ಲ,

 ಸಮಾಜ ಸೇವಕರು ದೇಶದ ಸೈನಿಕರಿದ್ದಂತೆ, ಸಮಾಜದ ಸೇವೆ ಎಂದರೆ ಅಷ್ಟು ಸುಲಭದ ಮಾತಲ್ಲ, ಯಾವುದೇ ಆಸೆಗೆ ಒಳಗಾಗದೆ ತನ್ನ ಸುತ್ತಮುತ್ತಲಿನ ಜನರ ಆರೈಕೆ, ಸಮಸ್ಯೆಗಳಿಗೆ ಸ್ಪಂದಿಸುತ್ತಾ ತನ್ನ ಜೀವನವನ್ನು ಸಮಾಜಕ್ಕಾಗಿ ಮುಡಿಪಾಗಿಡುವ  ಸೈನಿಕರಂತೆ. ಹೌದು ಸಾಮಾನ್ಯವಾಗಿ ನಮ್ಮ ಮನೆಯಲ್ಲಿರುವ ಸಮಸ್ಯೆಗಳನ್ನೇ ಎದುರಿಸಲು ಸಾಧ್ಯವಿಲ್ಲ, ಅದರ ನಡುವೆ ಸಮಾಜಕ್ಕಾಗಿ ಸೇವೆ ಮಾಡುವ ಮುತ್ತಿನಂತಹ ಮನುಜರ ಬಗ್ಗೆ ಅಲ್ಪವಾದರೂ ಯೋಚಿಸುವ ಜನರೇ ಬಹಳ ವಿರಳ.



       ಸಮಾಜ ಸೇವಕರು, ತನ್ನ ಸಮಸ್ಯೆಯನ್ನು ಬದಿಗೊತ್ತಿ ರಾತ್ರಿ ಹಗಲೆನ್ನದೆ ತನ್ನನ್ನು ತಾನು ಮತ್ತವರಿಗಾಗಿ ಜೀವಿಸುವ ಮುತ್ತಿನಂತಹ ಮನುಷ್ಯರು. ಯಾವುದೇ ಸಮಯದಲ್ಲಿ ಸ್ಪಂದಿಸಿ ಒಬ್ಬರಿಗೊಬ್ಬರು ಸಹಾಯವನ್ನು ಮಾಡುತ್ತ ಊರಿನ ಪರವೂರಿನ ಯಾವುದೇ ಸಮಸ್ಯೆಗಳಿಗೆ ಎದೆಯೊಡ್ಡಿ ನಿಲ್ಲುವ ಧೀರರು. ನ್ಯಾಯ , ನೀತಿ ರಾಜಕೀಯ, ಬಡವ, ಬಲ್ಲಿದನೆಂಬ ಬೇಧಭಾವಗಳಿಲ್ಲದೆ ದಿನದ ಇಪ್ಪತಾನಾಲ್ಕು ಘಂಟೆಯಲ್ಲೂ ಸ್ಪಂದಿಸಿ ಸಹಕರಿಸಿ ಜೀವನ ಮಾಡುವ ಯೋಗ್ಯ ಮನುಜರು. ಇವರುಗಳು ದೇಶದ, ಮಾನವ ಕುಲದ ನಿಜವಾದ ಆಸ್ತಿಗಳು, ಮಾನವೀಯತೆ, ಕರುಣೆ, ಮನುಷತ್ವ ಅರಿತ ಮನುಜರು.



      ಸಮಾಜಸೇವೆಯ ಭಾವನೆ ಸುಮ್ಮನೆ ಬರಲು ಸಾಧ್ಯವಿಲ್ಲ, ಮೊದಲಾಗಿ ತನ್ನ ಮನೆಯಿಂದ ಕಲಿತು ಬಂದಿರುವ ಸಂಸ್ಕಾರವಾಗಿರುತ್ತದೆ, ಅಥವಾ ತನ್ನ ಜೀವನದಲ್ಲಿ ಏನಾದರು ಅವಘಡ ಸಂಭವಿಸಿ ಜೀವನ ಏನೆಂದು ಅರಿತು ಇನ್ನುಳಿದ ದಿನದಲ್ಲಿ ಒಳಿತನ್ನು ಮಾಡಿ ಅಗಲಿಬಿಡಬೇಕು ಅನ್ನುವ ಯೋಚನೆ, ಅಥವಾ ದೇಶ, ಊರು ನನ್ನ ಮನೆಯೆಂದು ನಂಬಿ ಬದುಕುವ ಮೌಲ್ಯಯುತ ಜನರ ಗುಂಪು. ಹೇಳುವವರು ಹೇಳುತ್ತಲೇ ಇರಲಿ ನನ್ನ ಧ್ಯೇಯ, ನನ್ನ ಜೀವನ ಸಮಾಜಕ್ಕಾಗಿ ಮುಡಿಪಾಗಿ ಇಡುತ್ತೇನೆ ಎಂದು ಸ್ವ ಸಂಕಲ್ಪ ಮಾಡಿ ಬದುಕುತ್ತಿರುವ ಎಲ್ಲಾ ಸಮಾಜ ಸೇವಕರುಗಳಿಗೆ ನನ್ನ ಸಾವಿರ ನಮಸ್ಕಾರ.

     ಹುಟ್ಟಿದರೆ, ನಾಲ್ಕಾರು ಜನರಿಗೆ ಸಹಾಯಮಾಡಿ ಸಾಯಬೇಕು, ನನಗಾಗಿ ಏನೂ ಬೇಕಾಗಿಲ್ಲ, ಪ್ರಪಂಚವೇ ನನ್ನ ಮನೆ  ಆಸ್ತಿ, ಐಶ್ವರ್ಯ, ನಾವು ಬಂದಾಗ ತಂದಿಲ್ಲ ಹೋಗುವಾಗ ಕೊಂಡು ಹೋಗುವುದಿಲ್ಲ, ಬದುಕಿದರೆ ನಾಲ್ಕು ದಿನ ಚೆನ್ನಾಗಿ ಬದುಕಿದರೆ ಸಾಕು ಅನ್ನುವ ಸಮಾಜ ಸೇವಕರು ನಿಮ್ಮ ಸುತ್ತಮುತ್ತಲಲ್ಲಿ ಇದ್ದರೆ ಅದು ನಿಮ್ಮೆಲ್ಲರ ಭಾಗ್ಯ, ಇವರುಗಳು ಜನನಾಯಕ, ಜನನಾಯಕಿಯರಿಗಿಂತಲೂ ಹೆಚ್ಚಾಗಿ ಸಮಾಜಕ್ಕಾಗಿ ಕೆಲಸ ಮಾಡುವವರು.

  ನಮ್ಮ ಭಾರತಾಂಬೆಯ ಮಡಿಲಲ್ಲಿ ಇಂತಹ ಜನರ ಸೃಷ್ಟಿ ಇನ್ನಷ್ಟು ಆಗಲಿ, ಸಮಾಜ ಸೇವೆಯನ್ನು ಮಾಡುವ ಪ್ರತಿಯೊಂದು ಸೇವಕರಿಗೆ "ಭಾರತದ ಅನುರಾಗ " ಇನ್ನಷ್ಟು ಒಳಿತನ್ನು ಬಯಸುತ್ತದೆ. ಎಲ್ಲಾ ಸಮಾಜ ಸೇವಕರಿಗೆ ತಲೆಬಾಗಿ ನಮಸ್ಕಾರಿಸುತ್ತ

ನಿಮ್ಮ ಪ್ರೀತಿಯ

✍️: ಮಾಧವ. ಕೆ. ಅಂಜಾರು 







Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.